ಮಂಡ್ಯ : 60 ವರ್ಷದ ವೃದ್ದನಿಗೆ 20 ವರ್ಷ ಯುವತಿಯಿಂದ ದೋಖಾ?. ವಾಟ್ಸ್ ಅಪ್ ನಲ್ಲಿ ಚಾಟಿಂಗ್, ಆನ್ ಲೈನ್ ನಲ್ಲಿಯೇ ಹಣ ವಸೂಲಿ. ಯುವತಿ ಆಸೆಗೆ ಲಕ್ಷ ಕಳೆದುಕೊಂಡ ಅರ್ಚಕ. ಮಂಡ್ಯದಲ್ಲೊಂದು ಆನ್ ಲೈನ್ ದೋಖಾ ಕೇಸ್. ವಿಜಯಕಮಾರ್ ಹಣ ಕಳೆದುಕೊಂಡ ವೃದ್ದ. ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದ ವಿಜಯಕುಮಾರ್.
ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್ ಗೆ ಫೇಸ್ ಬುಕ್ ನಲ್ಲಿ ಯುವತಿ ಪರಿಚಯ. ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ.
ಹಲವು ಕಾರಣ ಹೇಳಿ ಆಗಾಗ ಹಣ ಕೇಳುತ್ತಿದ್ದ ಯುವತಿ. ಪೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ. ಹಲವು ಬಾರಿ ಸಿಗುವುದಾಗಿ ಹೇಳಿ ವಂಚಿಸಿರುವ ಚಾಲಾಕಿ. ಯುವತಿಯು ಸಿಗದೇ, ಹಣ ವಾಪಸ್ಸು ಬರದೇ ಕಂಗಾಲಾದ ವೃದ್ದ. ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು.

