ನವದೆಹಲಿ : ಲಕ್ಷಾಂತರ ನೌಕರರಿಗೆ ಮಹಾನವಮಿ ದಸರಾ ಹಬ್ಬಕ್ಕು ಮೊದಲೇ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಈ ಬಾರಿ ಶೇ.3 ರಿಂದ 4 ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಲಾಗುವುದು ಎನ್ನಲಾಗಿದೆ.
ಈ ವರ್ಷದ ಎರಡನೇ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಘೋಷಣೆಗೆ ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳಲ್ಲಿ ಆಗುತ್ತದೆ.
ಜುಲೈ ತಿಂಗಳು ಕೆಳದು ಒಂದೂವರೆ ತಿಂಗಳಾಗಿದೆ. ಇನ್ನೂ ಡಿಎ ಪರಿಷ್ಕರಣೆ ನಿರ್ಧಾರ ಪ್ರಕಟವಾಗಿಲ್ಲ. ಇದೇ ಸೆಪ್ಟಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕೇಂದ್ರವು ತನ್ನ ನೌಕರರಿಗೆ ಬಂಪರ್ ಕೊಡುಗೆ ಘೋಷಿಸಲಿದೆ.
ಈ ಹಿಂದೆ ತುಟ್ಟಿಭತ್ಯೆ ಶೇಕಡಾ 4ರಷ್ಟು ಹೆಚ್ಚಿಸಿದಾಗ ಅದರ ಪ್ರಮಾಣ 50ಕ್ಕೆ ತಲುಪಿತು. ಇದೀಗ ಮತ್ತೆ 3ರಷ್ಟು ಏರಿಕೆ ಮಾಡಿದರೆ ಅದರ ಪ್ರಮಾಣ ಒಟ್ಟು 53ಕ್ಕೆ ಹೆಚ್ಚಾಗಲಿದೆ. ಇದೆಲ್ಲ ಹೆಚ್ಚಳವು ಮೂಲ ವೇತನ ಹಾಗೂ ಮನೆ ಬಾಡಿಗೆ ಭತ್ಯೆಯಂತಹ ಇತರ ಏರಿಕೆ ಮೇಲೆ ಪ್ರಭಾವ ಬೀರುತ್ತದೆ.
ಕೇಂದ್ರ ಸರ್ಕಾರಿ ನೌಕರರು ಪ್ರತಿ ವರ್ಷದಂತೆ ಈ ವರ್ಷವು ಜುಲೈ ತಿಂಗಳ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಘೋಷಣೆಗೆ ಕಾಯುತ್ತಿದ್ದಾರೆ. ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚಾಗುವ ತುಟ್ಟಿಭತ್ಯೆ ಜನವರಿಯದ್ದು ಘೋಷಣೆ ಆಗಿದ್ದು, 2024ರ ಜುಲೈ ತಿಂಗಳದ್ದು ಘೋಷಣೆ ಬಾಕಿ ಇದೆ.
ಏಳನೇ ವೇತನ ಆಯೋಗ 2026ರ ಹೊತ್ತಿಗೆ ಕೊನೆಗೊಳ್ಳಲಿದೆ. ಅಂದು 8ನೇ ವೇತನ ಆಯೋಗ ಜಾರಿಗೆ ಬರಲಿದೆ. ಅದರ ಆಧಾರದಡಿ ಏನೆಲ್ಲ ವೇತನ, ತುಟ್ಟಿಭತ್ಯೆ, ತುಟ್ಟಿ ಪರಿಹಾರಗಳು ಏರಿಕೆ ನಿರೀಕ್ಷೆಯಲ್ಲಿದ್ದಾರೆ ನೌಕರರು.

