ಬಾದಾಮಿ : ಇಂದು ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಬಹಳ ವಿಶೇಷ ಎನೆಂದರೆ ಮಾನ್ಯ ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿ ಶಾಸಕರು ಬಾದಾಮಿ ಇವರ 42 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮಾನ್ಯ ಶ್ರೀ ಭೀಮಸೆನ್ ಬಿ ಚಿಮ್ಮನಕಟ್ಟಿ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ರಕ್ತ ಬಂಡಾರ ಬಾಗಲಕೋಟ ಹಾಗು ತಾಲೂಕು ಅರೋಗ್ಯ ಇಲಾಖೆ ಬಾದಾಮಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಹಾಗು ಬಿಪಿ ಶುಗರ್ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಜನಸಾಗರವೇ ಸೇರಿತ್ತು.
ಈ ಒಂದು ಕಾರ್ಯಕ್ರಮ ದಲ್ಲಿ ಶಾಸಕರ ಅಭಿಮಾನಿಗಳು ಅಷ್ಟೇ ಅಲ್ಲದೆ ಸಾರ್ವಜನಿಕರು ಹಾಗು ಪೊಲೀಸ್ ಇಲಾಖೆ ಪಿಎಸ್ಐ & ಹಲವೋ ಸಿಬ್ಬಂದಿ ಅರೋಗ್ಯ ಇಲಾಖೆ ವೈದ್ಯಾಧಿಕಾರಿಗಳು &ಸಿಬ್ಬಂದಿ ಮತ್ತು ಆಶಾ ಕಾರ್ಯರ್ತರು ವಿದ್ಯಾರ್ಥಿಗಳು ಹಾಗು ಗಣ್ಯರು ಆದ ಬಾಗಲಕೋಟ ವಿಜಯಪುರ ಕೆಎಮ್ಎಫ್ ಅಧ್ಯಕ್ಷರು ಈರನಗೌಡ ಕರಿಗೌಡರ ಪುರಸಭೆ ಅಧ್ಯಕ್ಷರು ಪಾಂಡು ಕಟ್ಟಿಮನಿ ಹಾಗು ಮಾಜಿ ಪುರಸಭೆ ಅಧ್ಯಕ್ಷರು ಮಂಜು ಹೊಸಮನಿ ಬಸು ದ್ಯಾಮಣ್ಣವರ ಮತ್ತು ದರಗನ್ನವರ ಶಿವು ಹಿರೇಮಠ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರು ಡಾಕ್ಟರ ಕಿತ್ತಲಿ ಕೆರೂರ ಪಟ್ಟಣದಲ್ಲಿ ಅಲ್ಲಿ ಅನೇಕ ಗಣ್ಯರು ಹಾಗು ಪಟ್ಟಣ ಪಂಚಾಯತ್ ಅಧ್ಯಕ್ಷರು ಸದಸ್ಯರು ಅಭಿಮಾನಿಗಳು ಸೇರಿ ಪದವಿ ಕಾಲೇಜು ಹಾಗು ಸರಕಾರಿ ಲೈಬ್ರರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಪುಸ್ತಕಗಳನ್ನು ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಾಗಿ ವೇದಿಕೆಯ ವಿತರಿಸಲಾಯಿತು.
ಬೇಲೂರ ಜಾಲಿಹಾಳ್ ಗ್ರಾಮದಲ್ಲಿ ಸಹ ಸರಕಾರಿ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು ಗ್ರಾಮದ ಹಿರಿಯರು ಸೇರಿ ಹೀಗೆ ಗುಳೇದಗುಡ್ಡ ತಾಲೂಕಿನಲ್ಲಿ ಸಹ ಜನ ಮೆಚ್ಚುವಂತಹಕಾರ್ಯಕ್ರಮ ಮಾಡಿದರು ಮಾನ್ಯ ಶ್ರೀ ಭೀಮಸೇನ್ ಚಿಮ್ಮನಕಟ್ಟಿ ಶಾಸಕರು ಇವರನ್ನು ಬಾದಾಮಿಯ ಜನತೆ ಮೆಚ್ಚುವಂತಹ ನಾಯಕನಾಗಿದ್ದು ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ಆಟದ ಮೈದಾನದಲ್ಲಿ ಈ ಹುಟ್ಟುಹಬ್ಬದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇಲ್ಲಿ ತಾಲೂಕು ಮತ್ತು ಗ್ರಾಮಗಳಿಂದ ಜನಸಾಗರವೇ ಸೇರಿತ್ತು ಊಟ ಉಪಹಾರ ಹಮ್ಮಿಕೊಳ್ಳಲಾಗಿತ್ತು.
ವರದಿ : ಬಸವರಾಜ್ ಕೆರೂರ

