ಬೆಂಗಳೂರು : ಇನ್ನು ಮುಂದೆ ಬೇಕರಿ ಮತ್ತು ಕಾಂಡಿಮೆಂಟ್ಸ್ ಗಳಲ್ಲಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್ ಹಾಕಾಲು ಮುಂದಾಗಿದೆ. ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳಿಗೆ ಪ್ರತ್ಯೇಕ ಲೈಸೆನ್ಸ್ ಜಾರಿ ಮಾಡಲು ಪಾಲಿಕೆ ಮುಂದಾಗಿದೆ. ಈಗಾಗಲೇ ನಗರದಲ್ಲಿ ಇರುವ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಅಂಗಡಿ ವ್ಯಾಪಾರಿಗಳಿಗೆ ಶಾಕ್ ನೀಡಲು ಬಿಬಿಎಂಪಿ ಮುಂದಾಗಿದ್ದು, ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳಿಗೆ ಪಾಲಿಕೆ ನಿರ್ಧಾರ ಅಚ್ಚರಿ ತಂದಿದೆ.
ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳಿಗೆ ಪ್ರತ್ಯೇಕ ಲೈಸೆನ್ಸ್ ಜಾರಿ ಮಾಡುವುದರಿಂದ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳು ಕಡ್ಡಾಯವಾಗಿ ಪರವಾನಗಿ ಪಡೆಯಬೇಕಾಗುತ್ತದೆ. ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಅಂಗಡಿಗಳು ತಂಬಾಕು ಮಾರಾಟಕ್ಕೆ ಲೈಸೆನ್ಸ್ ಪಡೆಯಬೇಕು, ಬೇಕರಿ, ಚಿಲ್ಲರೆ ಅಂಗಡಿ, ಬೀಡ ಶಾಪ್, ಟೀ ಅಂಗಡಿ, ಪುಟ್ ಪಾತ್ ಅಂಗಡಿಗಳು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಅಂಗಡಿಗಳು ಲೈಸೆನ್ಸ್ ಪಡೆಯೋದು ಕಡ್ಡಾಯವಾಗಲಿದೆ.
ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಯಾರಾದರೂ ಬೇಕರಿ ಮತ್ತು ಕಾಂಡಿಮೆಂಟ್ಸ್ ಗಳಲ್ಲಿ ಸಿಗರೆಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡಿದರೆ ಭಾರೀ ದಂಡ ತೆತ್ತಬೇಕಾಗುತ್ತದೆಯಂತೆ.
ವರ್ಷಕ್ಕೆ 500ರೂ ಹಣ ಪಾವತಿ ಮಾಡಿ ಲೈಸೆನ್ಸ್ ಪಡೆಯಬೇಕು, ಈಗಾಗಲೇ ನಗರದಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ಸಣ್ಣ ಪುಟ್ಟ ಅಂಗಡಿಗಳು ಸಿಗರೇಟ್, ಗುಟ್ಕ ಮಾರಾಟ ಮಾಡುತ್ತಿವೆ. ಒಂದು ವೇಳೆ ಲೈಸೆನ್ಸ್ ಇಲ್ಲದೇ ಸಿಗರೇಟ್, ಗುಟ್ಕ ಮಾರಾಟ ಮಾಡಿದ್ರೆ ಮೊದಲ ಬಾರಿಗೆ 5 ಸಾವಿರ ದಂಡ ವಿಧಿಸಲಾಗುತ್ತದೆ, ನಂತರ ಪ್ರತಿದಿನ 100 ರೂ ದಂಡ ವಿಧಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

