ಜೆರುಸಲೆಂ: ಇರಾನ್ ಜನರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಹತ್ವದ ಸಂದೇಶವನ್ನು ರವಾನಿಸುವ ಮೂಲಕ ಧೈರ್ಯ ತುಂಬಿದ್ದಾರೆ.ಹಿಜ್ಬುಲ್ಲಾ ಮತ್ತು ಹಮಾಸ್ ಭಯೋತ್ಪಾದಕ ಸಂಘಟನೆಗಳೊಂದಿಗಿನ ಸಂಘರ್ಷದ ನಡುವೆ ಇರಾನ್ ಜನರಿಗೆ ಇಸ್ರೇಲ್ ಪ್ರಧಾನಿ ಸಂದೇಶವನ್ನು ಕಳುಹಿಸಿದ್ದಾರೆ. ಇಂಗ್ಲಿಷ್ ಭಾಷೆಯ ವೀಡಿಯೋ ಸಂದೇಶ ರವಾನಿಸಿದ ಅವರು, ಇರಾನ್ ಜನರೊಂದಿಗೆ ಇಸ್ರೇಲ್ ನಿಂತಿದೆ ಎಂದು ತಿಳಿಸಿದ್ದಾರೆ.
ಪ್ರತಿದಿನ, ನಿಮ್ಮನ್ನು ಅಧೀನಗೊಳಿಸುವ ಆಡಳಿತವನ್ನು ನೀವು ನೋಡುತ್ತೀರಿ, ಲೆಬನಾನ್ ಅನ್ನು ರಕ್ಷಿಸುವ ಬಗ್ಗೆ, ಗಾಜಾವನ್ನು ರಕ್ಷಿಸುವ ಬಗ್ಗೆ ಭಾಷಣಗಳನ್ನು ಮಾಡುತ್ತೀರಿ. ಆದರೂ ಪ್ರತಿದಿನ ಆ ಆಡಳಿತವು ನಮ್ಮ ಪ್ರದೇಶವನ್ನು ಕತ್ತಲೆಯಲ್ಲಿ ಮತ್ತು ಯುದ್ಧದಲ್ಲಿ ಆಳವಾಗಿ ಮುಳುಗಿಸುತ್ತದೆ.
ಬಹುಪಾಲು ಇರಾನಿಯನ್ನರು ತಮ್ಮ ಆಡಳಿತವು ಅವರ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ ಎಂದು ತಿಳಿದಿದೆ. ಒಂದು ವೇಳೆ ನಿಮ್ಮ ಬಗ್ಗೆ ಕಾಳಜಿ ವಹಿಸಿದರೆ ಮಧ್ಯಪ್ರಾಚ್ಯದಾದ್ಯಂತ ನಿರರ್ಥಕ ಯುದ್ಧಗಳಿಗೆ ಶತಕೋಟಿ ಡಾಲರ್‌ಗಳನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸುತ್ತದೆ. ಇದು ನಿಮ್ಮ ಜೀವನವನ್ನು ಸುಧಾರಿಸಲು ಪ್ರಾರಂಭಿಸುತ್ತದೆ.
ನಿಮ್ಮ ಭರವಸೆಗಳನ್ನು ಮತ್ತು ನಿಮ್ಮ ಕನಸುಗಳನ್ನು ಪುಡಿಮಾಡಲು ಬಿಡಬೇಡಿ. ಹಮಾಸ್ ಮತ್ತು ಹಿಜ್ಬುಲ್ಲಾದ ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ನೀವು ಬೆಂಬಲಿಸುವುದಿಲ್ಲ ಎಂದು ನನಗೆ ತಿಳಿದಿದೆ. ಆದರೆ ನಿಮ್ಮ ನಾಯಕರು ಬೆಂಬಲಿಸುತ್ತಾರೆ. ಇಸ್ರೇಲ್ ನಿಮ್ಮೊಂದಿಗೆ ನಿಂತಿದೆ. ನಾವು ಒಟ್ಟಾಗಿ ಸಮೃದ್ಧಿ ಮತ್ತು ಶಾಂತಿಯ ಭವಿಷ್ಯವನ್ನು ತಿಳಿಯೋಣ. ಹೀಗೆ ಹಲವೂ ವಿಚಾರಗಳನ್ನು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.
ಮೋದಿ ಮಾತುಕತೆ :
ಪ್ರಸ್ತುತ ನಡೆಯುತ್ತಿರುವ ಮಧ್ಯ ಪ್ರಾಚ್ಯ ಬಿಕ್ಕಟ್ಟು ಮತ್ತು ಭಯೋತ್ಪಾದನೆಯನ್ನು ಎದುರಿಸುವ ಕಾರ್ಯತಂತ್ರ ಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇ ಲ್ ಪ್ರಧಾನಿ ಬೆಂಜಮಿನ್ ನೆತನ್ಯಾ ಹು ಅವರೊಂದಿಗೆ ಸಂವಾದ ನಡೆಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾ ಹು ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಸ್ವ ತಃ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಲ್ಲಿಮಾಹಿತಿ ನೀಡಿದ್ದಾರೆ. ಭಾರತವು ಶಾಂತಿಗೆ ಬದ್ಧವಾಗಿದೆ ಮತ್ತು ನಮ್ಮ ಜಗತ್ತಿನಲ್ಲಿ ಭಯೋತ್ಪಾ ದನೆಗೆ ಸ್ಥ ಳವಿಲ್ಲ ಎಂದು ಅವರು ಹೇಳಿದರು.

