ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪ್ರಕರಣದ ಎ-1 ಆರೋಪಿ ಮುರುಘಾ ಶರಣರ ಸಾಕ್ಷ್ಯ ವಿಚಾರಣೆ ಪೂರ್ಣಗೊಂಡಿದೆ. ಇಂದು ವಿಚಾರಣೆ ನಡೆಸಿದ ಚಿತ್ರದುರ್ಗದ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶ್ರೀಗಳ ಬಿಡುಗಡೆ ಆದೇಶ ಹೊರಡಿಸಿದೆ.
ಮುರುಘಾ ಮಠದ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಪ್ರಕರಣದ ಎ-1 ಆರೋಪಿ ಮುರುಘಾ ಈ ಹಿಂದೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿತ್ತು.
ಕೋರ್ಟ್ ನಲ್ಲಿ ಸಾಕ್ಷ್ಯಗಳ ವಿಚಾರ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಮೇರೆಗೆ ಮತ್ತೆ ಶ್ರೀಗಳನ್ನು, ವಿಚಾರಣೆ ಪೂರ್ಣಗೊಳಿಸುವವರೆಗೆ ಬಂಧಿಸಲಾಗಿತ್ತು. ಇಂದು ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಿ ಬಿಡುಗಡೆ ಆದೇಶ ಹೊರಡಿಸಿದೆ.
ಜೈಲಿನಿಂದ ಬಿಡುಗಡೆಯಾದ ಮುರುಘಾಶ್ರೀ ಸ್ವಾಗತಿಸಲು ಮುರುಘಾ ಮಠದ ಉಸ್ತುವಾರಿಯಾಗಿದ್ದ ಬಸವ ಪ್ರಭು ಶ್ರೀ ಮತ್ತು ಉತ್ತರಾಧಿಕಾರಿ ಬಸವಾದಿತ್ಯ ಜೈಲಿಗೆ ಧಾವಿಸಿದ್ದರು. ಬಿಡುಗಡೆಯಾದ ಮುರುಘಾಶ್ರೀ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಅಲ್ಲದೇ ಅವರ ಬೆಂಬಲಿಗರು ಹೂವಿನಹಾರ ಹಾಕುವ ಮೂಲಕ ಜಯಘೋಷ ಕೂಗಿದರು. ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿದರು.
ಬಳಿಕ ಪೊಲೀಸ್ ಬಿಗಿ ಭದ್ರತೆಯಲ್ಲಿ ನಗುನಗುತ್ತಾ ಮುರುಘಾಶ್ರೀ ನಗುನಗುತ್ತಾ ತೆರಳಿದರು. ಮುರುಘಾ ಮಠದ ಮುಂದೆ ಸಾಗುತ್ತಾ ರಸ್ತೆ ಬದಿ ನಿಂತಿದ್ದ ಜನರತ್ತ ಮುರುಘಾಶ್ರೀ ಕೈ ಬೀಸಿದರು.
ಈ ವೇಳೆ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮುರುಘಾಶ್ರೀ, ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಗುವ ನಿರೀಕ್ಷೆಯಿದೆ. ಶರಣಸಂಸ್ಕ್ರತಿ ಉತ್ಸವದ ಸಂಭ್ರಮಾಚರಣೆ ವೇಳೆ ಬಿಡುಗಡೆಯಾಗಿರುವ ಕುರಿತು ನಾವು ಯೋಚಿಸಿ ಹೆಜ್ಜೆಇಡುತ್ತೇವೆ. ಈಗ ಮಾತನಾಡಲು ಸಕಾಲವಲ್ಲ. ಮೌನವಹಿಸುವ ಕಾಲ ಎಂದಷ್ಟೇ ಹೇಳುತ್ತೇವೆ ಎಂದರು.

