ಬೆಂಗಳೂರು : ಬೆಂಗಳೂರಲ್ಲಿ ಒಂದು ದಿನದಲ್ಲಿ ಮೂರು ತರದ ವೆದರ್ ಬದಲಾಗುತ್ತಿದ್ದು ಮಕ್ಕಳಲ್ಲಿ ಹೆಚ್ಚಾಯ್ತು ವೈರಲ್ ಫೀವರ್ ಹೆಚ್ಚಾಗುತ್ತಿದೆ. ವಿಪರೀತ ಚಳಿ… ಆಗಾಗ ಬಂದು ಹೋಗೋ ಮಳೆ… ಮಕ್ಕಳನ್ನ ಬೆಂಬಿಡದೇ ಕಾಡುತ್ತಿದೆ.
ಮಕ್ಕಳಲ್ಲಿ ಕೆಮ್ಮು, ನೆಗಡಿ, ಶೀತ, ನಿಮೋನಿಯಾದಂತಹ ಕಾಯಿಲೆಗಳು ಹೆಚ್ಚಾಗುತ್ತಿದ್ದು ಆದಷ್ಟು ಮಕ್ಕಳ ಬಗ್ಗೆ ಗಮನ ವಹಿಸುವಂತೆ ವೈದ್ಯರ ಸಲಹೆ ನೀಡಿದ್ದಾರೆ. ಮಕ್ಕಳಿಗೆ ಬೆಚ್ಚಗಿನ ಉಡುಪು ತೊಡಿಸುವುದರ ಜೊತೆ ಬಿಸಿ ಆದ ಪದಾರ್ಥ ನೀಡುವಂತೆ ಸಲಹೆ ನೀಡಿದ್ದಾರೆ.
ಅತಿ ಹೆಚ್ಚು ಹಣ್ಣುಗಳನ್ನ ತಿನ್ನುವಂತೆ ಸಲಹೆ ನೀಡಿರುವ ವೈದ್ಯರು ಒಂದು ವೇಳೆ ಎರಡು ದಿನಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಕೆಮ್ಮು ನೆಗಡಿ ಇದ್ರೆ ಕೂಡಲೇ ವೈದ್ಯರ ಬಳಿತೋರಿಸಿಕೊಳ್ಳಲು ಸೂಚನೆ ನೀಡಿದ್ದಾರೆ.

