ಬೆಂಗಳೂರು,ಜುಲೈ 30, 2025: ವಿದ್ಯುತ್ ಬಿಲ್ ಪಾವತಿಗೆ ಬೆಸ್ಕಾಂ (BESCOM) ಕಚೇರಿಗಳಲ್ಲಿರುವ ಎಟಿಪಿ (ಎನಿ ಟೈಮ್ ಪೇಮೆಂಟ್) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್ 1 ರಿಂದ ಸ್ಥಗಿತಗೊಳಿಸಲಾಗುವುದು.
ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್, ಆನ್ ಲೈನ್ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್ ಸೈಟ್, ಬೆಸ್ಕಾಂ ಮಿತ್ರ ಆ್ಯಪ್ ಮೂಲಕ ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಬಹುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ವಿದ್ಯುತ್ ಬಿಲ್ ನೀಡುವ ಸ್ಪಾಟ್ ಬಿಲ್ಲಿಂಗ್ ಡಿವೈಸ್, ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (ಬಿಬಿಪಿಎಸ್), ನೆಫ್ಟ್, ಇಸಿಎಸ್ ಹಾಗೂ ಇತರೆ ಮೂಲಕ ಕೂಡ ಬಿಲ್ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೇ, ಯುಪಿಐ ಪಾವತಿ (ಗೂಗಲ್ ಪೇ, ಫೋನ್ ಪೇ, ಪೇಟಿಎಂ,ಭೀಮ್ ಮುಂತಾದ ಆ್ಯಪ್) ಮೂಲಕವೂ ವಿದ್ಯುತ್ ಬಿಲ್‌ಗಳನ್ನು ಪಾವತಿಸಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
- ನಟಿ ಕೃತಿ ಗೌಡ ಜೊತೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾದ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ
- ರಾಜ್ಯದಲ್ಲಿ ಈ ವಾರ ಭಾರಿ ಬಿಸಿಲು, ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆ
- ಸೆಪ್ಟೆಂಬರ್‌ನಲ್ಲಿ ಟಿಮ್ ಕುಕ್ ನಿವೃತ್ತಿ, ಆ್ಯಪಲ್ ಹೊಸ ಸಿಇಒ ಆಗಿ ಜಾನ್ ಟೆರ್ನಸ್ ನೇಮಕ
- ರಾಜ್ಯದಲ್ಲಿ ಇಂದಿನಿಂದ ಜನಗಣತಿ ಆರಂಭ
- ಆಟಿಕೆ ಕಾರು ಬಳಸಿ ದೆಹಲಿಯಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ನಾಲ್ವರು ಶಂಕಿತ ಉಗ್ರರ ಬಂಧನ

