ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ. ಹಾಲ ಶಿರಗೂರ ಗ್ರಾಮ ದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸುಗ್ಗಿ ಹಬ್ಬ ಆಚರಿಸಲಾಯಿತು. ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಕ್ಕಳಿಂದ ಸುಗ್ಗಿ ಹಬ್ಬ ಆಚರಣೆ ಮಾಡಲಾಯಿತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಸುಗ್ಗಿ ಹಬ್ಬ ಮತ್ತು ಮಕ್ಕಳಸಂತೆ ಕಾರ್ಯಕ್ರಮ ವನ್ನ ರಿಬ್ಬಿನ್ ಕತ್ತರಿಸು ಮೂಲಕ ಪ್ರೌಡಶಾಲೆಯ SDMC ಅದ್ಯಕ್ಷ ಶಂಕರ ದಳವಾಯಿ ಮತ್ತು ಸರಕಾರಿ ಪ್ರಾಥಮಿಕ ಶಾಲೆ SDMC ಅದ್ಯಕ್ಷ ಸಿದ್ದೂ ದಳವಾಯಿ ಶಾಲೆಯ ಸಿಬ್ಬಂದಿ ವರ್ಗದವರು ಚಾಲನೆ ನೀಡಿದರು.
ನಂತರ ಸಂಕ್ರಾಂತಿಯ ಸುಗ್ಗಿ ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯೋಪಾಧ್ಯಾಯರು ಗ್ರಾಮದ ಮುಖಂಡರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮಕ್ಕಳು ರೈತನ ವೇಷ ಭೂಷಣ ತೋಟ್ಟು ಎತ್ತುಗಳ ಬಂಡೆಯಲ್ಲಿ ಸಂಕ್ರಾಂತಿದಿನದ ವಿಷೇಶ ಭೋಜನ ತರುವುದು ನಮ್ಮ ಪೂರ್ವಜರು ಹೇಗೆ ಸಂಕ್ರಾಂತಿ ಹಬ್ಬವನ್ನ ಆಚರಿಸುತ್ತಿದ್ದರು ಆ ಆಚರಣೆಯು ಈಗ ನಶಿಸಿ ಹೊಗುತ್ತಿದ್ದು, ಈ ಶಾಲೆಯಲ್ಲಿ ಹಳ್ಳಿಯ ಜೀವನವನ್ನ ಪರಿಚಯಸುವಗೋಸ್ಕರ,ರೈತದಿನನಿತ್ಯ ಉಪಯೋಗಿಸುವ ವಸ್ತಗಳನ್ನ ಸಂಕ್ರಾಂತಿಯನ್ನವದು ಸುಗ್ಗಿಯ ಸಂಭ್ರಮವನ್ನ ಇತ್ತು ಮಕ್ಕಳಿಗೆ ನೇನಪುಮಾಡಿ ಕೊಡವದರ ಮೂಲಕ ಈ ವಿಶೇಷ ಹಬ್ಬವನ್ನ ಮಕ್ಕಳ ಜೋತೆಗೆ ಶಿಕ್ಷಕ ವೃಂದ ಸ್ಥಳಿಯರು ನಸಿಸಿ ಹೋಗುತ್ತಿರು ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡಿದು ,
ಮಕ್ಕಳ ವ್ಯವಹಾರ ಜ್ಞಾನ ಹೆಚ್ಚಿಸಲು ಸುಗ್ಗಿ ಹಬ್ಬದ ಪ್ರಯುಕ್ತ ಮಕ್ಕಳ ಸಂತೆ ಆಯೋಜಿಸಿದರು ಇದಲ್ಲಿ ತಮ್ಮ ಮಕ್ಕಳು ಸಂತೆಯಲ್ಲಿ ಕುಳಿತು ವಸ್ತುಗಳನ್ನ ಮಾರುವಿಕೆ ನೋಡಿ ಮಕ್ಕಳ ಪಾಲಕರು ಖುಷಿ ಪಟ್ಟು ಮಕ್ಕಳ ಹತ್ತಿರ ವಸ್ತು ಕರಿದಿಸಲು ಮುಂದಾದರು,
ಈ ಸಮಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು, SDMC ಸದಸ್ಯರು ಗ್ರಾಮದ ಪ್ರಮುಖರು, ಪಾಲಕರು ಶಾಲೆ ಎಲ್ಲ ಶಿಕ್ಷಕರೂ, ಶಿಕ್ಷಕಿಯರು ,ಅಡುಗೆ ಸಿಬ್ಬಂದಿಯವರು, ಗ್ರಾಮಸ್ಥರು ಮುದ್ದು ಮಕ್ಕಳು ಉಪಸ್ಥಿತರಿದ್ದರು
ವರದಿ : ಎಂ. ಕೆ. ಸಪ್ತಸಾಗರ,

