ನವದೆಹಲಿ : ಮೋದಿ ಸರ್ಕಾರ ಭಾರತದಲ್ಲಿ 2000 ರೂ. ನೋಟುಗಳನ್ನು ರದ್ದು ಮಾಡಿರುವುದು ಗೊತ್ತೇ ಇದೆ. ಇದೀಗ, 200 ರೂ. ನೋಟು ಸಹ ವಾಪಸ್ ಪಡೆಯುವ ಬಗ್ಗೆ ಸುದ್ದಿ ಹಬ್ಬಿದೆ. ಹೌದು, ದೇಶದಲ್ಲಿ 2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಂತೆ, 200 ರೂ. ನೋಟುಗಳನ್ನು ಸರ್ಕಾರ ರದ್ದು ಮಾಡಲಿದೆಯೇ? ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 200 ರೂಪಾಯಿಯ ನೋಟುಗಳನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಅಲ್ಲದೆ 2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆದುಕೊಂಡ ನಂತರ, ದೇಶದಲ್ಲಿ 200 ಮತ್ತು 500 ರೂಪಾಯಿ ನಕಲಿ ನೋಟುಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ವಹಿವಾಟಿನ ಸಮಯದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಜೊತೆಗೆ 200 ರೂಪಾಯಿ ನೋಟನ್ನು ಹೇಗೆ ಗುರುತಿಸಿ ಎಂದು ಸೂಚನೆ ನೀಡಿದೆ. ಅದೇನೆಂದರೆ ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ 200 ರೂ., ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಸ್ಪಷ್ಟ ಚಿತ್ರ, ಸೂಕ್ಷ್ಮ ಅಕ್ಷರಗಳಲ್ಲಿ ‘RBI’, ‘ಭಾರತ್’, ‘ಇಂಡಿಯಾ’ ಮತ್ತು ‘200’, ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು ಎಂದು ಹೇಳಿದೆ.
2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆದುಕೊಂಡ ನಂತರ, ದೇಶದಲ್ಲಿ 200 ಮತ್ತು 500 ರೂಪಾಯಿ ನಕಲಿ ನೋಟುಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಆರ್‌ಬಿಐ ಹೇಳಿದೆ. ವಹಿವಾಟಿನ ಸಮಯದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದೆ.
ನಕಲಿ ನೋಟುಗಳ ಪತ್ತೆ ಹಚ್ಚಿ ಅದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಒತ್ತಾಯಿಸಿದೆ. ವಹಿವಾಟಿನ ಸಮಯದಲ್ಲಿ ನೋಟುಗಳನ್ನು ಸರಿಯಾಗಿ ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ.
ಇನ್ನೂ ಯಾರಾದರೂ ನಕಲಿ ನೋಟು ಪಡೆದರೆ, ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲು ಸೂಚಿಸಲಾಗಿದೆ. ಅದರೊಂದಿಗೆ 200 ರೂಪಾಯಿ ನೋಟನ್ನು ವಾಪಾಸ್ ಪಡೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದೂ ಆರ್‌ಬಿಐ ಮಾಹಿತಿ ತಿಳಿಸಿದೆ.

