ಧ್ರುವ ಸರ್ಜಾ ಅಭಿನಯದ ಪ್ರೇಮ್ ನಿರ್ದೇಶನದ ‘ಕೆಡಿ – ದಿ ಡೆವಿಲ್’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಚಿತ್ರದ ಕೊನೆಯ ಹಾಡು ಮತ್ತು ಕ್ಲೈಮ್ಯಾಕ್ಸ್‌ನ ಕೆಲವು ದೃಶ್ಯಗಳಷ್ಟೇ ಬಾಕಿ ಉಳಿದಿವೆ.
ಇದೀಗ ಕೆಡಿ ಚಿತ್ರದ ತಾರಾ ಬಳಗಕ್ಕೆ ಬಾಲಿವುಡ್ ಗಾಯಕ ಮಿಕಾ ಸಿಂಗ್ ಸೇರ್ಪಡೆಗೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಿದ್ದು, ವಿಲಿಯಂ ಡೇವಿಡ್ ಮತ್ತು ಶ್ರೀನಿವಾಸ್ ಪಿ. ಪ್ರಭು ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಕಲನವನ್ನು ನಿರ್ವಹಿಸುತ್ತಿದ್ದಾರೆ.
ನಟ ಧ್ರುವ ಸರ್ಜಾ ಅಭಿನಯದ ಕೆಡಿ’ ಸಿನಿಮಾದ ಶಿವ..ಶಿವ.. ಸಾಂಗ್ ರಿಲೀಸ್ ಆಗಿ ತುಂಬಾನೇ ವೈರಲ್ ಆಗಿದೆ .. ಈಗ ಅದೇ ಸಲಿಗೆ ಮತ್ತೊಂದು ಹಾಡು ಸೇರಿದೆ ಹೌದು ಬಾಲಿವುಡ್ ಗಾಯಕ ಮಿಕಾ ಸಿಂಗ್ ಹಾಡಿರೋ ಸೆಟ್ಟಾಗಲ್ಲ ನಂಗು ನಿಂಗೂ ಅನ್ನೋ ಹಾಡು ಇದೀಗ ರಿಲೀಸ್ ಆಗಿದೆ.
ಹೌದು ವಿಶೇಷ ತಾರಾಗಣವನ್ನು ಹೊಂದಿರುವ ಈ ಚಿತ್ರ ತಂಡಕ್ಕೆ ಮತ್ತೊಬ್ಬ ಸ್ಟಾರ್ ಸಿಂಗರ್ ಜಾಯಿನ್ ಆಗಿದ್ದು . Kannada,Telugu,Tamil, Malayalam, Hindi ಭಾಷೆಯಲ್ಲೂ ಹಾಡು ಮೂಡಿ ಬಂದಿರೋದು ವಿಶೇಷ

