ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ (Suraj Revanna) ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಇಂದು ಸೂರಜ್ ರೇವಣ್ಣಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಈ ಹಿನ್ನಲೆ ಜೈಲು ಸೇರಲ್ಲಿದ್ದು, ಸಹೋದರಿಬ್ಬರು ಒಂದೇ ಜೈಲಿನಲ್ಲಿ ಇರಲ್ಲಿದ್ದಾರೆ.
ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದರು. ಬಳಿಕ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆರೋಪಿ ಸೂರಜ್ ರೇವಣ್ಣನನ್ನು ತಮ್ಮವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ಇದನ್ನೂ ಓದಿ: 6 ವರ್ಷದ ಬಾಲಕಿಯ ಶವ ರೈಲ್ವೆ ನಿಲ್ದಾಣದಲ್ಲಿ ಪತ್ತೆ – ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಶಂಕೆ
ಈ ಹಿನ್ನೆಲೆಯಲ್ಲಿ ಕೋರ್ಟ್, ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್ ರೇವಣ್ಣನನ್ನು ಜುಲೈ 03 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅದರಂತೆ ಇಂದು ಕಸ್ಟಡಿ ಮುಗಿದಿದ್ದರಿಂದ ಸೂರಜ್ನನ್ನು ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದು, ಇದೀಗ ಕೋರ್ಟ್ ಜುಲೈ 18ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಸಹೋದರರ ಜಾಮೀನು ಕಥೆ ಏನು?
ಇನ್ನೊಂದೆಡೆ ಸೂರಜ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆಯನ್ನು 42ನೇ ಎಸಿಎಂಎಂ ಕೋರ್ಟ್ ನಾಳೆಗೆ (ಜುಲೈ 04) ಮುಂದೂಡಿದೆ. ಸೂರಜ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತುಕೊಂಡ ಕೋರ್ಟ್, ಇದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ನಾಳೆಗೆ ವಿಚಾರಣೆ ಮುಂದೂಡಿದೆ.ಇದನ್ನೂ ಓದಿ: ಆಂಧ್ರದಲ್ಲಿ ಎಲ್ಲೇ ಹೋದರೂ ಸಹ ದರ್ಶನ್ ಪ್ರಕರಣ ಏನು ಅಂತ ನನ್ನನ್ನೇ ಕೇಳ್ತಾರೆ: ನಟ ಸಾಯಿಕುಮಾರ್
ಜೈಲಿನಲ್ಲಿ ಒಡಹುಟ್ಟಿದವರು
ಅತ್ಯಾಚಾರ ಪ್ರಕರಣದಲ್ಲಿ ಸೂರಜ್ ರೇವಣ್ಣ ಸಹೋದರ ಪ್ರಜ್ವಲ್ ರೇವಣ್ಣ ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಸೂರಜ್ ಸಹ ಇದೇ ಜೈಲು ಸೇರಿದ್ದಾರೆ. ಇನ್ನು ಮಧ್ಯಾಹ್ನ ಅಷ್ಟೇ ರೇವಣ್ಣ ಜೈಲಿಗೆ ಭೇಟಿ ನೀಡಿ ಪ್ರಜ್ವಲ್ ಭೇಟಿಯಾಗಿದ್ದರು.

ಇನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ವಿಶೇಷ ನ್ಯಾಯಾಲದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕನ್ನಡತಿಗೆ ವಿಶ್ವ ಸುಂದರಿ ಕಿರೀಟ,ಕರುನಾಡಿಗೆ ಹೆಮ್ಮೆ – ಡಾ.ಶೃತಿ ಹೆಗಡೆ ಸೌಂದರ್ಯದ ಗುಟ್ಟೇನು?

