ಮುಂಬೈ: ಪ್ರಧಾನಿ ಮೋದಿ ಅವರ ಉತ್ತರಾಧಿಕಾರಿಯ ಕುರಿತಾದ ಊಹಾಪೋಹಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ತ ಳ್ಳಿಹಾಕಿದ್ದಾರೆ. ಪ್ರಧಾನಿ ಮೋದಿ ಅವರು ಮುಂದಿನ ಹಲವು ವರ್ಷಗಳ ಕಾಲ ದೇಶವನ್ನು ಮುನ್ನಡೆಸಲಿದ್ದಾರೆ. 2029ರಲ್ಲಿ ಮೋದಿ ಅವರನ್ನು ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ನೋಡುತ್ತೇವೆ ಎಂದು ಫಡ್ನವೀಸ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಉತ್ತರಾಧಿಕಾರಿಯನ್ನು ಹುಡುಕುವ ಅಗತ್ಯವಿಲ್ಲ. ಪ್ರಧಾನಿ ಮೋದಿ ನಮ್ಮ ನಾಯಕರು ಮತ್ತು ಭವಿಷ್ಯದಲ್ಲಿಯೂ ಹಾಗೆಯೇ ಇರುತ್ತಾರೆ. ನಾಯಕ ಸಕ್ರಿಯವಾಗಿರುವಾಗ ಉತ್ತರಾಧಿಕಾರದ ಬಗ್ಗೆ ಚರ್ಚಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಅನುಚಿತವೆಂದು ಪರಿಗಣಿಸಲಾಗಿದೆ.
ನಮ್ಮ ಸಂಸ್ಕೃತಿಯಲ್ಲಿ ತಂದೆ ಜೀವಂತವಾಗಿರುವಾಗ ಉತ್ತರಾಧಿಕಾರದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಇದು ಮೊಘಲ್ ಸಂಸ್ಕೃತಿ. ಇದರ ಬಗ್ಗೆ ಚರ್ಚಿಸಲು ಇನ್ನೂ ಸಮಯ ಬಂದಿಲ್ಲ ಎಂದು ಅವರು ತಿಳಿಸಿದರು.
ಪ್ರಧಾನಿ ಮೋದಿ ಅವರು ನಿವೃತ್ತರಾಗುತ್ತಿರುವ ಸಂದೇಶವನ್ನು ನೀಡಲು ಭಾನುವಾರ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ತಲುಪಿದ್ದರು ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮೋದಿ ತಮ್ಮ ನಿವೃತ್ತಿಯನ್ನು ಘೋಷಿಸಲು ಆರ್‌ಎಸ್‌ಎಸ್ ಕಚೇರಿಗೆ ಹೋಗಿದ್ದರು. ನನಗೆ ತಿಳಿದ ಮಟ್ಟಿಗೆ ಅವರು 10-11 ವರ್ಷಗಳಲ್ಲಿ ಒಮ್ಮೆಯೂ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿಲ್ಲ. ಆರ್‌ಎಸ್‌ಎಸ್ ನಾಯಕತ್ವದಲ್ಲಿ ಬದಲಾವಣೆ ಬಯಸುತ್ತದೆ. ಪ್ರಧಾನಿ ಮೋದಿ ಈಗ ಹೊರಡುತ್ತಿದ್ದಾರೆ ಎಂದು ಹೇಳಿದರು.

