ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ
ರಾಮನಗರ ಜಿಲ್ಲೆ ಇನ್ನುಮುಂದೆ ಇರಲ್ಲ
ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ರಾಮನಗರ?
‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರದಲ್ಲಿ ದೊಡ್ಡ ತಿರುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ & ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಡುವೆ ಶುರುವಾಗಿದ್ದ ತಿಕ್ಕಾಟದಲ್ಲಿ ಡಿಕೆಶಿ ಅವರಿಗೆ ಗೆಲುವು ಸಿಕ್ಕಿದೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿ ಬೆಂಗಳೂರಿನ ಜೊತೆಯಲ್ಲಿ ಬೆರೆಸಬೇಕು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸು & ಪ್ಲಾನ್ ಇದೀಗ ಭರ್ಜರಿ ಸಕ್ಸಸ್ ಕಂಡಿದೆ.
ಬೆಂಗಳೂರು ಅತಿ ವೇಗದಿಂದ ಬೆಳೆಯುತ್ತಿದ್ದು, ರಾಮನಗರ ಜಿಲ್ಲೆ ಬೆಂಗಳೂರಿನ ಪಕ್ಕದಲ್ಲೇ ಇದೆ. ಹೀಗಿದ್ದಾಗ ರಾಮನಗರ & ಕನಕಪುರ ಮೂಲದಿಂದಲೇ ರಾಜಕೀಯವಾಗಿ ಬೆಳೆದಿರುವ ಎಚ್.ಡಿ. ಕುಮಾರಸ್ವಾಮಿ ಅವರು, ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರದಲ್ಲಿ ಭಾರಿ ವಿರೋಧ ಮಾಡಿದ್ದರು.
ಹೀಗಿದ್ದಾಗ ಇದನ್ನ ಚಾಲೆಂಜ್ ರೀತಿ ತೆಗೆದುಕೊಂಡ ಡಿ.ಕೆ. ಶಿವಕುಮಾರ್ ಅವರು, ಕೊನೆಗೂ ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರದಲ್ಲಿ ಭಾರಿ ದೊಡ್ಡ ಗೆಲುವು ಕಂಡಿದ್ದಾರೆ. ಹೌದು, ಸಿದ್ದರಾಮಯ್ಯ ಅವರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈಗ ರಾಮನಗರ ಜಿಲ್ಲೆ ಹೆಸರನ್ನ ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ನೀಡಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರವನ್ನ ಕೈಗೊಳ್ಳಲಾಗಿದೆ. ಈ ಮೂಲಕ ಹಿಂದೆ ಬೆಂಗಳೂರು ಗ್ರಾಮಾಂತರ & ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿ ಸೇರಿ ಪ್ರತ್ಯೇಕ ಜಿಲ್ಲೆಯಾಗಿದ್ದ ರಾಮನಗರಕ್ಕೆ ಇದೀಗ ಬೆಂಗಳೂರಿನ ಹೆಸರು ಸಿಗುತ್ತಿದೆ. ಇನ್ನು ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿರುವ ವಿಚಾರವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

