ಪಾಟ್ನಾ: ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಮೂಲಕ ಭಾರತದ ಬೂಟುಗಳ ಬೇಡಿಕೆ ಹೆಚ್ಚಾಗಿದೆ,
ರಷ್ಯಾ ಮತ್ತು ಉಕ್ರೇನ್ ನಡುವೆ ದೀರ್ಘ ಕಾಲದ ಯುದ್ಧ ಮುಂದುವರಿದಿದ್ದು ರಷ್ಯಾ ಸೈನಿಕರು ಭಾರತದಲ್ಲಿ ತಯಾರಾದ ಧರಿಸುವ ಬೂಟುಗಳು ಧರಿಸುತ್ತಿದ್ದಾರೆ. ಈ ಬೂಟುಗಳನ್ನು ಬಿಹಾರದ ಹಾಜಿಪುರದಲ್ಲಿ ತಯಾರಿಸಲಾಗುತ್ತದೆ.
ರಷ್ಯಾಕ್ಕೆ ಬೂಟುಗಳನ್ನು ರಫ್ತು ಮಾಡುವ ಅತಿದೊಡ್ಡ ಸಂಸ್ಥೆಗಳಲ್ಲಿ ಹಾಜಿಪುರದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್ ಒಂದಾಗಿದೆ. ಈ ಶೂಗಳ ತೂಕವು ಹಗುರವಾಗಿರುತ್ತದೆ. ಇವುಗಳನ್ನು ಧರಿಸುವುದರಿಂದ ಭಾರ ಎನಿಸುವುದಿಲ್ಲ. ಇವುಗಳಿಗೆ ಬಳಸುವ ಸೋಲ್ ಕೂಡ ವಿಶಿಷ್ಟವಾಗಿದೆ. ಹೀಗಾಗಿ ರಷ್ಯಾದಲ್ಲಿ ಈ ಬೂಟುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎನ್ನಲಾಗಿದೆ.
ಕಳೆದ ವರ್ಷ ರೂ.100 ಕೋಟಿ ರೂ.ಮೌಲ್ಯದ 1.5 ಮಿಲಿಯನ್ ಜೋಡಿ ಶೂಗಳನ್ನು ರಫ್ತು ಮಾಡಲಾಗಿದೆ. ಮುಂದಿನ ವರ್ಷ ಶೇ.50ರಷ್ಟು ಹೆಚ್ಚಿಸುವ ಉದ್ದೇಶದಿಂದ ಮುನ್ನಡೆಯುತ್ತಿದ್ದೇವೆ ಎಂದು ಸಂಸ್ಥೆ ಮುಖ್ಯಸ್ಥ ಸಾಹಿಬ್ ಕುಮಾರ್ ಹೇಳಿದ್ದಾರೆ.

