ಕುಣಿಗಲ್ : ಡಾ” ಬಾಬು ಜಗಜೀವನ ರಾಮ್, ಮತ್ತು, ಸಂವಿಧಾನ ಶಿಲ್ಪಿ ಡಾ” ;ಬಿ ಆರ್ ಅಂಬೇಡ್ಕರ್ ರವರ ಜನ್ಮ ದಿನಾಚರಣೆಯನ್ನು ಏಪ್ರಿಲ್ 14ರಂದು ಒಂದೇ ದಿನ ಆಚರಿಸಲು ಶಾಸಕ “ಎಚ್ ಡಿ ರಂಗನಾಥ್ ರವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ “ಸಭೆಯಲ್ಲಿ ತೀರ್ಮಾನಿಸಲಾಯಿತು,,
ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಡಾ” ಬಾಬು ಜಗಜೀವನ ರಾಂ, ರವರ ಜಯಂತಿಯನ್ನು ಏಪ್ರಿಲ್ ಐದರಂದು ಸಾಂಕೇತಿಕವಾಗಿ ತಾಲೂಕು ಕಚೇರಿಯಲ್ಲಿ ಆಚರಿಸುವುದು ಹಾಗೂ ಏಪ್ರಿಲ್ 14 ರಂದು, ಡಾ”ಬಾಬು ಜಗಜೀವನ ರಾಮ್ ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ಶಾಸಕರು ತೀರ್ಮಾನ ಮಾಡಿದರು,,
ಪ್ರವಾಸಿ ಮಂದಿರದಿಂದ ಡಾ” ಬಿ ಆರ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಂ ರವರ ಭಾವಚಿತ್ರ ಒತ್ತ ಬೆಳ್ಳಿರಥ ವಾಹನದಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡದೊಂದಿಗೆ ಡೊಳ್ಳು ಕುಣಿತ ,ಸೋಮನ ಕುಣಿತ, ತಮಟೆ ವಾದ್ಯ ,ಸೇರಿದಂತೆ ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಮೂಲಕ ಶಾಸಕ “ಎಚ್ ಡಿ ರಂಗನಾಥ್” ರವರ ಅಧ್ಯಕ್ಷತೆಯಲ್ಲಿ ಪುರಸಭಾ ಅಧ್ಯಕ್ಷರು ಮಂಜುಳಾ ಜಿ, ಲೋಕಸಭಾ ಸದಸ್ಯರಾದ ಡಾ. ಸಿ ಎನ್ ಮಂಜುನಾಥ್ ಸೇರಿದಂತೆ, ವಿವಿಧ ಗಣ್ಯರ ಸಮ್ಮುಖದಲ್ಲಿ ಆಚರಿಸುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಜಾತಿ ವರ್ಗ ,ಹಾಗೂ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು, ಹಾಗೂ ವಿವಿಧ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ವಿತರಣೆ ಕಾರ್ಯಕ್ರಮವು ಜರುಗಲಿದ್ದು ಏಪ್ರಿಲ್ 13 ಮತ್ತು 14 ರಂದುಪಟ್ಟಣದ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ದೀಪಾಲಂಕಾರ ಮಾಡುವಂತೆ ತೀರ್ಮಾನ ಕೈಗೊಳ್ಳಲಾಯಿತು,,
ತಾಲೂಕು ದಂಡಾಧಿಕಾರಿ “ರಶ್ಮಿ ಯು ರವರು” ಮಾತನಾಡಿ ತಾಲೂಕು ಕಚೇರಿಯ ಮುಂದೆ ಡಾ “ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ನಿರ್ಮಿಸುವುದು ಹಾಗೂ ಅಂಬೇಡ್ಕರ್ ಭವನದ ಕಳಪೆ ಕಾಮಗಾರಿಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಹಸಿಲ್ದಾರ್ “ರಶ್ಮಿ ಯು “ರವರು ಭರವಸೆ ನೀಡಿದರು,,
ಇದೇ ಸಂದರ್ಭದಲ್ಲಿ ಅತ್ಯುತ್ತಮ ಶಾಸಕರಾದ “ಡಾಕ್ಟರ್ ಎಚ್ ಡಿ ರಂಗನಾಥ್ “, ತಾಲೂಕು ದಂಡಾಧಿಕಾರಿ “ರಶ್ಮಿ ಯು”ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ, ತಾಲೂಕು ಸಹಾಯಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಲಿಂಗಯ್ಯ, ಉಪನೋಂದಾಣಾಧಿಕಾರಿ ಯಶೋಧ, ಪುರಸಭಾ ಮುಖ್ಯಾಧಿಕಾರಿ ಮಂಜುಳ ಜಿ, ಪರಿಸರ ಇಂಜಿನಿಯರ್ ಚಂದ್ರಶೇಖರ್ ,ಪುರಸಭೆ ಅಕೌಂಟೆಂಟ್ ಪದ್ಮ, ತಾಲೂಕು ವೈದ್ಯಾಧಿಕಾರಿ,ಮರಿಯಪ್ಪ, ಕುಣಿಗಲ್ ಠಾಣೆ ಪಿ ಎಸ್ ಐ ವಿದ್ಯಾಶ್ರೀ, ಎಲ್ಲ ಇಲಾಖೆಯ ಅಧಿಕಾರಿಗಳು, ಹಾಗೂ ಉಪಸ್ಥಿತರಿದ್ದರು,
ವರದಿ : ನರಸಿಂಹರಾಜು

