ಕುಣಿಗಲ್:-ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವವನ್ನು ಜ,26 ರಂದು ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು ಆಚರಿಸಬೇಕು ಎಂದು ಶಾಸಕ ಎಚ್ ಡಿ ರಂಗನಾಥ್ ರವರು ಸೂಚನೆ ನೀಡಿದ್ದರು ,
ಕುಣಿಗಲ್ ಪಟ್ಟಣದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಟೆ ಇಲ್ಲಿನ, ವೈದ್ಯಾಧಿಕಾರಿ ರಮೇಶ್ ವೈ ಆರ್, ಗಣರಾಜ್ಯೋತ್ಸವದಂದು ಸರ್ಕಾರಕ್ಕೂ ಗೌರವ ಕೊಡದೆ ಶಾಸಕರಿಗೂ ಗೌರವ ಕೊಡದೆ ಹಾಗೂ ಸಮಯಕ್ಕೆ ಸರಿಯಾಗಿ ಧ್ವಜವನ್ನು ಕಟ್ಟದೆ ಇರುವುದು ಬೇಜವಾಬ್ದಾರಿತನದ ಕೆಲಸ, ರಾಷ್ಟ್ರೀಯ ಹಬ್ಬದಂದು ಸಬೂಬು ಹೇಳಿಕೊಂಡು ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಆಸ್ಪತ್ರೆಯಲ್ಲಿ ಒಟ್ಟು 13 ಸಿಬ್ಬಂದಿಗಳಿದ್ದು ಕೇವಲ ಐದು ಸಿಬ್ಬಂದಿಗಳು ಮಾತ್ರ ರಾಷ್ಟ್ರೀಯ ಹಬ್ಬದಲ್ಲಿ ಪಾಲ್ಗೊಂಡಿದ್ದರು, ಉಳಿದ 9 ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ,ಈ ಹಿಂದೆ ಅಂಬೇಡ್ಕರ್ ಅವರ ಫೋಟೋ ಆಸ್ಪತ್ರೆಯಲ್ಲಿ ಇಲ್ಲದಿರುವ ಕಾರಣ ತಾಲೂಕಿನ ದಲಿತ ಮುಖಂಡರುಗಳು ಮನವಿ ಸಲ್ಲಿಸಿದ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋವನ್ನು ತಂದಿಟ್ಟಿದ್ದರು,
ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು ಅದರಂತೆ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿಕೊಂಡು ಪ್ರತಿನಿತ್ಯ ಬಡ ರೋಗಿಗಳ ಕರ್ತವ್ಯವನ್ನು ನಿರ್ವಹಿಸುವಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ನಾಗರಿಕರು ತಿಳಿಸಿದರು, ಸರ್ಕಾರಿ ಸಂಬಳಕ್ಕೆ ಭಾಜನರಾಗಿದ್ದಾರೆ ರಮೇಶ್ ವೈ ಆರ್ ರವರು ಇವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ.
ಮೇಲಾಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಟಿಎಚ್ಒ ಮರಿಯಪ್ಪ ನವರಿಗೆ ಇವರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರು ಕೂಡ ಅವರ ಮೇಲೆ ಶಿಸ್ತು ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ, ಸಾರ್ವಜನಿಕರು ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ದಯವಿಟ್ಟು ಈ ಆಸ್ಪತ್ರೆಗೆ ಸೂಕ್ತವಾದ ವೈದ್ಯರನ್ನು ನೇಮಿಸಬೇಕು ಇಲ್ಲದಿದ್ದರೆ ಬಡವರ ಗತಿ ಏನು ಇವರಿಗೆ ಕರ್ತವ್ಯದ ಮೇಲೆ ಕಾಳಜಿ ಇಲ್ಲದಂತಾಗಿದೆ, ಎಂದು ಆಸ್ಪತ್ರೆಯ ವಿರುದ್ಧ ಕಿಡಿಕಾರಿದ್ದಾರೆ,
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪಾಲಾಕ್ಷ ಎನ್ ಟಿ, ಕವಿತಾ ಎಸ್ ಎಸ್, ಗೀತಾ ಶುಶ್ರೂಷಕರು, ಮೀನಾಕ್ಷಿ ಶುಶ್ರೂಷಕರು, ಅನಸೂಯ ಕಾರ್ಯಕ್ರಮದಲ್ಲಿ ಹಾಜರಿದ್ದರು,
ವರದಿ : ನರಸಿಂಹರಾಜು ಎಚ್

