ಮೊದಲ ನಿರ್ದೇಶನದ ಸಿನಿಮಾ ಬಗ್ಗೆ ಗುಡ್ ನ್ಯೂಸ್ ಕೊಟ್ರು ರಂಜನಿ
ನಿರ್ದೇಶನದ ಕ್ಯಾಪ್ ಧರಿಸಲು ಸಜ್ಜಾಗಿದ್ದಾರೆ ಪುಟ್ಟಗೌರಿ
ಏ.18ರಂದು ಸಿನಿಮಾ ಪೋಸ್ಟರ್ ಬಿಡುಗಡೆ
ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ ರಾಘವನ್
ಕನ್ನಡ ಚಿತ್ರರಂಗದಲ್ಲಿ ಪ್ರತಿ ದಿನ ಹಲವು ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಅನೇಕ ಸಿನಿಮಾಗಳು ಥಿಯೇಟರ್ಗೆ ಬಂದ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇದಕ್ಕೆ ಕಾರಣ ಪ್ರಚಾರದ ಕೊರತೆ.
ತಮ್ಮ ನಿರ್ದೇಶನದ ಮೊದಲ ಸಿನಿಮಾಗೆ ಆ ರೀತಿ ಆಗಬಾರದು ಎಂಬುದು ರಂಜನಿ ರಾಘವನ್ ಉದ್ದೇಶ. ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗಿನಿಂದಲೇ ಸಿನಿಮಾ ಪ್ರಚಾರ ಕೂಡ ಆರಂಭಿಸಿದ್ದಾರೆ. ಏಪ್ರಿಲ್ 18ರಂದು ಚಿತ್ರದ ಪೋಸ್ಟರ್ ಲಾಂಚ್ ಆಗಲಿದೆ.
ಈ ಚಿತ್ರದ ಟೈಟಲ್ನಲ್ಲಿ ಇನ್ಸ್ಟಾಗ್ರಾಮ್ ಖಾತೆ ಕೂಡ ಓಪನ್ ಆಗಲಿದೆ. ಮುಂದಿನ ದಿನಗಳಲ್ಲಿ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಡುವ ಆಲೋಚನೆ ಮಾಡಿದ್ದಾರೆ ರಂಜನಿ ರಾಘವನ್

