ಮುಂಬೈ : ಕಾಂತಾರ ಬಳಿಕ ದೇಶದಾದ್ಯಂತ ಸುದ್ದಿಯಲ್ಲಿರುವ ಸು ಫ್ರಮ್ ಸೋ ಸಿನೆಮಾ ಇದೀಗ ಬಾಲಿವುಡ್ ಮೆಟ್ಟಿಲೇರಲಿದೆ. ಈಗಾಗಲೇ ಮಲೆಯಾಳಂ, ತೆಲುಗುವಿಗೆ ಡಬ್ ಆಗಿ ಈಗಾಗಲೇ ಅಲ್ಲೂ ಸಕ್ಸಸ್ ಆಗಿದ್ದು, ಬಾಲಿವುಡ್ ಮಂದಿಗೂ ಸು ಫ್ರಮ್ ಸೋ ಹವಾ ತಟ್ಟಿದೆ. ಈಚೆಗಷ್ಟೇ ‘ಕಲ್ಕಿ’ ಸಿನಿಮಾದ ನಿರ್ದೇಶ ನಾಗ ಅಶ್ವಿನ್, ಸು ಫ್ರಮ್ ಸೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ನಟ ಅಜಯ್ ದೇವ್‌ಗನ್ ಸಿನೆಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಸ್ಟಾರ್ ನಟರಾಗಿರುವ ಅಜಯ್ ದೇವಗನ್ ‘ಸು ಫ್ರಂ ಸೋ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ನಿರ್ದೇಶದ ಜೆಪಿ ಹಾಗೂ ನಿರ್ಮಾಪಕ ರಾಜ್ ಬಿ ಶೆಟ್ಟಿಯನ್ನು ಭೇಟಿ ಮಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಈ ಬಗ್ಗೆ ನಿರ್ದೇಶಕ ಜೆಪಿ ತುಮ್ಮಿನಾಡ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಅಜಯ್ ದೇವಗನ್ ಅವರು ನಮ್ಮ ಸಿನಿಮಾ ವೀಕ್ಷಿಸಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸಿ ಸಿನಿಮಾ ಬಗ್ಗೆ ಚರ್ಚೆ ನಡೆಸಿದರು. ಅವರೆಷ್ಟು ಅದ್ಭುತವಾದ ವ್ಯಕ್ತಿತ್ವ ಉಳ್ಳವರು ಎಂಬುದು ಅವರೊಟ್ಟಿಗಿನ ಭೇಟಿಯಿಂದ ತಿಳಿದು ಬಂತು. ದಿ ಗ್ರೇಟ್ ಅಜಯ್ ಅವರಿಗೆ ನನ್ನ ಹೃದಯಪೂರ್ವಕ ಗೌರವಗಳು’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅಜಯ್ ಅವರೊಟ್ಟಿಗೆ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

