ಇಂದು ಬಾಗಲಕೋಟ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ದಿಂದ ಇಂದು ಜಿಲ್ಲಾಡಳಿತ ಭವನಕ್ಕೆ ರೈತರು ಮುತ್ತಿಗೆ ಹಾಕಿದ್ದು ರೈತರ ಕಬ್ಬಿನ ಬಿಲ್ ಆಗದೆ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಅನ್ಯಾಯ.
ಮಾಡುತ್ತಿದ್ದು ರೈತರು ತಮ್ಮ ಹೋರಾಟ ಮಾಡುತ್ತ ದಿಕ್ಕಾರ ಕೂಗುತ್ತಾ ಜಿಲ್ಲಾಡಳಿತ ಭವನಕ್ಕೆ ಬರುವದನ್ನು ಕಂಡು ಪೊಲೀಸ್ ಇಲಾಖೆಯವರು ತಕ್ಷಣ ಬ್ಯಾರಿಕೆಡ ಹಾಕಿ ರೈತರನ್ನು ತಡೆದರು. ಆಗ ರೈತರು ಆಕ್ರೋಶಗೊಂಡು ಅಧಿಕಾರಿಗಳ ವಿರುದ್ಧ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕೊಗುತ್ತಾ ರಸ್ತೆಯಲ್ಲಿ ಕುಳಿತರು ಇಲ್ಲಿ ಅಧಿಕಾರಿಗಳು ಬರುವರೆಗೂ ಇಲ್ಲೆ ಹೋರಾಟ ಮಾಡುತ್ತೇವೆ ಎಂದಾಗ.
ತಕ್ಷಣ ಜಿಲ್ಲಾಧಿಕಾರಿಗಳು ಆದ ಜಾನಕಿ ಹಾಗೂ ಎಸ್ ಪಿ ಅಮರನಾಥ ರೆಡ್ಡಿ ಸ್ಥಳಕ್ಕೆ ದಾವಿಸಿ ರೈತರ.ಸಮಸ್ಯೆಗೆ ಸ್ಪಂದಿಸಿ.ರೈತರನ್ನು ಜಿಲ್ಲಾಡಳಿತ ಸಭಾ ಭವನಕ್ಕೆ ಕರೆದುಕೊಂಡು ಹೋದರು ಹೋರಾಟದಲ್ಲಿ ಬಾಗಲಕೋಟ ಜಿಲ್ಲೆಯ ಎಲ್ಲಾ ತಾಲೂಕಾ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರುಗಳು ಹಾಗೂ ಸದಸ್ಯರು ಈ ಹೋರಾಟದಲ್ಲಿ ಭಾಗಿಯಾಗಿದ್ದರು