ಗೋಕಾಕ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆಗೈದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿ ಗೋಕಾಕದಲ್ಲಿ ಪ್ರತಿಬಟನೆ ನಡೆಸಿ ಹತ್ಯೆಗೊಳಗಾದವರಿಗೆ ಶೃದ್ದಾಂಜಲಿ ಅರ್ಪಿಸಿದರು.
ಬಿಜೆಪಿಯ ನೂರಾರು ಕಾರ್ಯಕರ್ತರು ಶಾಸಕ ರಮೇಶ ಜಾರಕಿಹೋಳಿ ಗೃಹ ಕಚೇರಿಯಿಂದ ಕೆ,ಎಮ್,ಎಪ್, ನಿರ್ದೇಶಕ ಅಮರನಾಥ ಜಾರಕಿಹೋಳಿಯವರ ನೇತೃತ್ವದಲ್ಲಿ ಬಸವೇಶ್ವರ ವೃತ್ತದ ವರೆಗೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು,
ಪ್ರತಿಭಟನೆಯ ದಾರಿಯುದ್ದಕ್ಕೂ ಪಾಕಿಸ್ತಾನ ಮತ್ತು ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ವಿರುದ್ದ ದಿಕ್ಕಾರ ಕೂಗೂತ್ತಾ ಬಿಜೆಪಿ ಕಾರ್ಯಕರ್ತರು ಉಗ್ರರನ್ನು ಸೆದೆಬಡೆಯಲು ಕೆಂದ್ರ ಸರಕಾರಕ್ಕೆ ಒತ್ತಾಯಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪಾಕಿಸ್ತಾನದ ಉಗ್ರರಿಗೆ ದಿಕ್ಕಾರ ಕೂಗಿದರು, ಈ ಸಂದರ್ಭದಲ್ಲಿ ಉಗ್ರರಿಂದ ಹತ್ಯೆಯಾದ 28 ಪ್ರವಾಸಿಗರಿಗೆ ಕ್ಯಾಂಡಲ್ ಹಚ್ಚಿ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಕರವೆ ತಾಲೂಕಾ ಅದ್ಯಕ್ಷ ಕಿರಣ ಡಮಾಮಗರ ಮಾತನಾಡಿ ಕರ್ನಾಟಕದ ಪ್ರವಾಸಿಗರನ್ನು ಸೇರಿ 28 ಜನರ ದರ್ಮ ಕೇಳಿ ಹತ್ಯೆಮಾಡಿದ್ದು ಪ್ರತಿ ಭಾರತಿಯನಿಗೂ ಮಾಡಿದ ಅವಮಾನ ಮಾಡಲಾಗಿದೆ, ಇಂತವರನ್ನು ಮೋದಿ ಸರಕಾರ ಸದೆ ಬಡಿದಿದ್ದಾರೆ,ಅದರ ಇನ್ನು ಉಳಿದ ಉಗ್ರರ ಸದೆ ಬಡೆಯಲು ಮೋದಿ ಸರಕಾರ ಮುಂದಾಗಬೇಕೆಂದರು.
ನಂತರ ಮಂಜು ಅಮ್ಮಣಗಿ ಮಾತನಾಡಿ ಉಗ್ರವಾದಿಗಳು ನೇರವಾಗಿ ಭಾರತಿಯ ಸೈನಿಕರ ಜೊತೆ ಹೊರಾಡಬೇಕಿತ್ತು ನಪುಂಸಕರಂತೆ ಪ್ರವಾಸಿಗರ ಹತ್ಯೆ ಮಾಡಬಾರದಿತ್ತು ಪ್ರವಾಸಿಗರು ಅಮಾಯಕರು ಅಂತವರ ಮೇಕೆ ಯಾಕೆ,ನೇರವಾಗಿ ಸೈನಿಕರ ಜೊತೆ ಮಾಡಿ ಆಗ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತಸಹಾಯಕರಾದ ಸುರೆಶ ಸನದಿ, ನಗರ ಬಿಜೆಪಿ ಘಟಕದ ಅದ್ಯಕ್ಷ ಭೀಮಶಿ ಭರಮನ್ನವರ, ಸುರೇಶ ಪತ್ತಾರ, ಮಾಜಿ ಉಪಾದಕ್ಷ ಬಸವರಾಜ ನ್ಯಾಯವಾದಿ ದೇಮಶೆಟ್ಟಿ, ಆರೆನ್ನವರ, ರವಿ ಕಡಕೋಳ,ಸೇರಿದಂತೆ ನೂರಾರು ಮಹಿಳೆಯರು ಸೇರಿ ಹತ್ಯೆಯಾದ ಇತರ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೊರಿದರು.