ಮೈಕ್ರೋ ಫೈನಾನ್ಸ್ ವಿಪರೀತ ಬಡ್ಡಿದರಕ್ಕೆ ಜನತೆ ಹೈರಾನಾದ ಬೆನ್ನಲ್ಲೇ ಅಕ್ರಮ ಬಡ್ಡಿಕೋರರ ಹಾವಳಿ ಕೂಡ ಹೆಚ್ಚಾಗಿದೆ.ಗ್ರಾಮೀಣ ಪ್ರದೇಶದ ಬಡ ಜನರು ತಮ್ಮ ಅವಶ್ಯಕತೆಗೆ ಸ್ವಲ್ಪ ಹಣ ತಗೆದು ಜೀವನ ನಡೆಸಲು ಮುಂದಾದಾಗ ಅಸಲಿಗಿಂತ ಬಡ್ಡಿಯೇ ಯಮಪಾಶ ವಾಗುತ್ತಿದೆ.
ಈ ಕುರಿತಂತೆ ಒಂದು exclusive ಆಡಿಯೋ ಸಂಪೂರ್ಣ ವಾಹಿನಿಗೆ ಲಭ್ಯ ವಾಗಿರುತ್ತದೆ. ಈ ಅಕ್ರಮ ಬಡ್ಡಿಕೋರ ಆಸಾಮಿ ಬಾಗಲಕೋಟ ಜಿಲ್ಲೆಯ ರಬಕವಿ-ಬಹನಟ್ಟಿ ತಾಲೂಕಿನ ಮಾರಾಪೂರ ಗ್ರಾಮದವ ಈ ಆಸಾಮಿಯ ಹೆಸರು ಪ್ರಕಾಶ ಅಲ್ಲಪ್ಪ ಯಡಳ್ಳಿ ಸುಮಾರು 7 -8 ವರ್ಷಗಳಿಂದ ಈ ಅಕ್ರಮ ಬಡ್ಡಿ ನಡೆಸಿ ಜನರ ಜೀವ ಹಿಂಡುತ್ತಿದ್ದಾನೆ.
ಸದ್ಯ ಈತನ ಅಕ್ರಮ ಬಡ್ಡಿ ವ್ಯವಹಾರಕ್ಕೆ ನೊಂದ ಅದೇ ಮಾರಾಪುರ ಗ್ರಾಮದ ಅನ್ವರ ಲಾಲಾಸಾಬ್ ನದಾಫ್ ಎಂಬ ವ್ಯಕ್ತಿಯೊಬ್ಬ ವಿಷಸೇವಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮದ್ಯ ಹೋರಾಡುತ್ತಿದ್ದಾನೆ.
ಈ ಕುರಿತಂತೆ ಈತನ ಅಕ್ರಮ ಬಡ್ಡಿ ವ್ಯವಹಾರದ ಆಡಿಯೋ ಸಂಪೂರ್ಣ ನ್ಯೂಸ್ ಗೆ ಲಬ್ಯವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಇವನ ಹಾಗೂ ಈತನ ಸಹಚರರ ಮೇಲೆ ಸೂಕ್ತ ಕ್ರಮ ತಗೆದು ಕೊಳ್ಳಬೇಕಿದೆ
ಸಂಪೂರ್ಣ ನ್ಯೂಸ್