ತುರುವೇಕೆರೆ, ಪಹಲ್ಗಾಮಾ ಭಯೋತ್ಪಾದಕ ದಾಳಿ ಖಂಡಿಸಿ ಹಾಗೂ ಭಯೋತ್ಪಾದಕರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ತುರುವೇಕೆರೆ ತಾಲೂಕು ನಾಗರಿಕರ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು, ಮೊದಲಿಗೆ ಪಟ್ಟಣದ ತಿಪಟೂರು ರಸ್ತೆಯಲ್ಲಿರುವ ಗಣಪತಿ ಪೆಂಡಲ್ ನಿಂದ ಬಾಣಸಂದ್ರ ರಸ್ತೆವರೆಗೂ ಉಗ್ರರ ವಿರುದ್ಧ ಮತ್ತು ಪಾಕಿಸ್ತಾನದ ವಿರುದ್ಧ ದಿಕ್ಕಾರ ಹೋಗುತ್ತಾ ಮೆರವಣಿಗೆಯ ಮೂಲಕ ಆಗಮಿಸಿ ಬಾಣಸಂದ್ರ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು ಇದೇ ವೇಳೆ ಪ್ರೊ, ಪುಟ್ಟರಂಗಪ್ಪ ಮಾತನಾಡಿ ಉಗ್ರವಾದಿಗಳು ಅಮಾಯಕರನ್ನು ಹತ್ಯೆ ಮಾಡಿರುವುದು ನಾವುಗಳು ಸಹಿಸುವುದಿಲ್ಲ ಅಮಾಯಕ ಹಿಂದುಗಳ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿ ತೀವ್ರ ಖಂಡನೀಯವಾಗಿದೆ,
ಪ್ರವಾಸಕ್ಕೆ ತೆರಳಿದ್ದ ಅಮಾಯಕ ಹಿಂದುಗಳ ಮೇಲೆ ಪಾಕಿಸ್ತಾನ ಪ್ರಯೋಗಿತ ಉಗ್ರಗಾಮಿಗಳು ದಾಳಿ ನಡೆಸುವ ಮೂಲಕ ಭಾರತದ ಸಮಸ್ತ ಹಿಂದುಗಳಿಗೆ ಬೆದರಿಕೆ ಹಾಕಿದ್ದಾರೆ, ರಾಷ್ಟ್ರೀಯತೆ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕು ನಾವು ಈ ಕೃತ್ಯವನ್ನು ಖಂಡಿಸುತ್ತೇವೆ ಎಂದರು. ಮುಂದುವರೆದು ಭೀಮೋತ್ಸವ ಸಮಿತಿ ಸಂಸ್ಥಾಪಕರಾದ ಮೂರ್ತಿ ಸಿ ಎಸ್ ಮಾತನಾಡಿ ಪ್ರತಿಯೊಬ್ಬರು ಒಗ್ಗಟ್ಟಿನಿಂದ ನಿರೂಪಿಸಬೇಕಿದೆ ಸಮಸ್ತ ಭಾರತೀಯರು ದೇಶದ ರಚನೆಗಾಗಿ ನರೇಂದ್ರ ಮೋದಿ ಅವರ ಕೈಗೆ ಅಧಿಕಾರ ನೀಡಿದ್ದೇವೆ ನಾವು ಕೊಟ್ಟ ಅಧಿಕಾರವನ್ನು ಸಮರ್ಥಕವಾಗಿ ಬಳಸಿ ಭಯೋತ್ಪಾದಕರನ್ನು ಬುಡ ಸಮೇತ ಕಿತ್ತು ಹಾಕಬೇಕು ನಾವುಗಳು ಭಾರತದೊಂದಿಗೆ ಮತ್ತು ಭಾರತೀಯ ಸೈನ್ಯದೊಂದಿಗೆ ನಾವೆಲ್ಲರೂ ಸದಾ ಬೆಂಬಲವಾಗಿ ನಿಲ್ಲಬೇಕು ಇಡೀ ಜಗತ್ತಿನಲ್ಲಿ ಹಿಂದುಗಳಿಗಾಗಿ ಇರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರ ಎಂದರು, ಇದೇ ಸಂದರ್ಭದಲ್ಲಿ ಹಿರಿಯ ವಕೀಲರಾದ ಧನಪಾಲ್ ಮಾತನಾಡಿ ಹಿಂದುಗಳಿಗಾಗಿ ಇರುವ ಏಕೈಕ ರಾಷ್ಟ್ರವೆಂದರೆ ಭಾರತ ಮಾತ್ರ ಆದರೆ ಮುಸಲ್ಮಾನರು, ಕ್ರೈಸ್ತ ಧರ್ಮೀಯರು, ನಾವೆಲ್ಲರೂ ಸಮಾನತೆಯಿಂದ ಇದ್ದೇವೆ ನಮ್ಮಗಳಲ್ಲಿ ಯಾವುದೇ ಜಾತಿಯ ತಾರತಮ್ಯವಿಲ್ಲದೆ ಭಾರತ ದೇಶ ಭಾರತ ಮಾತೆ ಎಂದುಕೊಂಡಿದ್ದೇವೆ ಇಂತಹ ನೆಲದಲ್ಲಿ ಉಗ್ರರ ಕೃತ್ಯ ಬಹಳ ಖಂಡನೀಯ, ಹಿಂದೂ ರಾಷ್ಟ್ರವಾದ ಭಾರತವನ್ನು ನಾವು ರಕ್ಷಣೆ ಮಾಡಿ ಸುಭದ್ರ ಗೊಳಿಸದಿದ್ದರೆ ಇಡೀ ಹಿಂದೂ ಸಮಾಜ ಮುಂದಿನ ದಿನಗಳಲ್ಲಿ ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ, ದೇಶದ ಪ್ರತಿಯೊಬ್ಬ ಭಾರತೀಯರು ಸಹ ಎಚ್ಚೆತ್ತು ಕೊಳ್ಳಬೇಕು ಎಂದರು, ಚೌದ್ರಿ ನಾಗೇಶ್ ಮಾತನಾಡಿ ಭಯೋತ್ಪಾದಕರ ಹಾಗೂ ಭಯೋತ್ಪಾದಕರ ಪೋಷಣೆ ಮಾಡುತ್ತಿರುವ ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಧರ್ಮದ ಆಧಾರದಲ್ಲಿ ದಾಳಿ ಮಾಡಿ ಅಮಾಯಕರ ಹತ್ಯೆ ಆಗಿರುವುದರಿಂದ ಹಿಂದೂಗಳಿಗೆ ಎಚ್ಚರಿಕೆ ಗಂಟೆಯಾಗಿದೆ, ಭಾರತದಲ್ಲಿ ಹಿಂದೂಗಳು ಒಗ್ಗಟ್ಟಾಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನ ಮರೆಯಬಾರದು ನಮ್ಮ ದೇಶಕ್ಕೆ ಎದುರಾಗುವ ದುಷ್ಟರ ಸಂಹಾರಕೆ ನಮ್ಮ ಸೈನ್ಯ ಸಶಕ್ತವಾಗಿದೆ, ಭಾರತ ಸರ್ಕಾರ ತಕ್ಷಣ ಕಠಿಣ ಕ್ರಮವಹಿಸಿ ಭಯೋತ್ಪಾದಕರ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿದರು,
ಇದೇ ವೇಳೆ ಡಿಎಸ್ಎಸ್ ಸಂಘಟನೆ, ಜಯ ಕರ್ನಾಟಕ ಸಂಘಟನೆ, ಕರುನಾಡು ರಕ್ಷಣಾ ವೇದಿಕೆ, ಕನ್ನಡ ರಕ್ಷಣಾ ವೇದಿಕೆ, ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಪದಾಧಿಕಾರಿಗಳು ಹೀಗೆ ಅನೇಕ ವಿವಿಧಪರ ಸಂಘಟನೆಗಳ ಮುಖಂಡರು, ಇನ್ನರ್ವಿಲ್ ಸಂಘಟನೆಯ ಪದಾಧಿಕಾರಿಗಳು ಉಗ್ರರ ಹತ್ಯೆ ಖಂಡಿಸಿ ಧಿಕ್ಕಾರ ಕೂಗುತ್ತಾ ಪ್ರತಿಭಟಿಸಿ ಗ್ರೇಡ್ 2 ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

