ತುಮಕೂರು :ಗುಬ್ಬಿ;ಸಂಜೀವಿನಿ ಯುವ ಜನ ಸಂಘ ರಿ ಚೇಳೂರು ಡ್ರೀಮ್ ಕಂಪ್ಯೂಟರ್ ಎಜುಕೇಶನ್ ತರಬೇತಿ ಕೇಂದ್ರ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖೆ ಸಮಿತಿ ಇವರ ಸಹಯೋಗದಲ್ಲಿ ವಿಶ್ವ ತಾಯಂದಿರ ದಿನವನ್ನು ಡ್ರೀಮ್ ಕಂಪ್ಯೂಟರ್ ಎಜುಕೇಶನ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಲು ಮೂಲಕ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮ್ಮನವರು ಉದ್ಘಾಟಿಸಿದ್ದರು.
ಹಾಗೆ ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಅಜಯ್ ಕುಮಾರ್ ಎಎಂ ಅವರು ವಿಶ್ವ ತಾಯಂದಿರ ದಿನಾಚರಣೆ ಕುರಿತು ಸು ವಿಸ್ತಾರವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೋಷಕರಿಗೆ ವಿಶೇಷವಾಗಿ ಸೀರೆ ಬಳೆ ಅರಿಶಿನ ಕುಂಕುಮ ನೀಡುವಮುಖಾಂತರ ಗೌರವವನ್ನು ಸಲ್ಲಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜಯಮ್ಮ, ಸಂಜೀವಿನಿ ಯುವಜನ ಸಂಘದ ಅಧ್ಯಕ್ಷ ಅನಿಲ್ ಕುಮಾರ್ , ಸಂಜೀವಿನಿ ಯುವ ಜನ ಸಂಘದ ಕಾರ್ಯದರ್ಶಿ ವಿಶ್ವನಾಥ್ ರಾಷ್ಟ್ರೀಯ ಮಾನವ ಹಕ್ಕುಗಳ ತನಿಖೆ ಸಮಿತಿಯ, ಜಿಲ್ಲಾಧ್ಯಕ್ಷ ಶೇಕ್ ಮಹಮ್ಮದ್, ಗೌರವಾಧ್ಯಕ್ಷ ಹನುಮಂತಯಪ್ಪ , ರಘು ನಂದನ್, ಡ್ರೀಮ್ ಕಂಪ್ಯೂಟರ್ ಎಜುಕೇಶನ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ಆಶಾ, ಮಹಾಲಕ್ಷ್ಮಿ, ಇನ್ನು ಮುಂತಾದ ತಾಯಂದಿರು, ಪೋಷಕರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು

