ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕರ್ನಲ್
ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ
ಗೋಕಾಕ್ ನ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರ ಪತ್ನಿ
ಜಗತ್ತಿನ ಗಮನ ಸೆಳೆದಿದ ನಮ್ಮ ಲೇಡಿ ಕರ್ನಲ್ ಸೋಫಿಯಾ ಖುರೇಷಿ
ಕನ್ನಡದ ಸೊಸೆ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ
ನಮ್ಮ ದೇಶಕ್ಕಾಗಿ ಪಣ ತೊಟ್ಟಿರುವ ಬೆಳಗಾವಿಯ ಸೊಸೆ ಅನ್ತಲೆ ಹೆಸರುವಾಸಿಯಾಗುತ್ತಿರುವ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ನೋಡೋಣ ಬನ್ನಿ
ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಇವತ್ತು ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಜನಜನಿತ ಹೆಸರು. ಅವರು ಬೆಳಗಾವಿಯ ಸೊಸೆ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರ ಹುಟ್ಟೂರು ಕೊಣ್ಣೂರಲ್ಲಿ ಅವರ ಮನೆ ಇದೆ. ಹೌದು
ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ , ಬೆಳಗಾವಿಯ ಕೊಣ್ಣೂರು ಗ್ರಾಮದ ಸೊಸೆಯಾಗಿ, ದೇಶದ ಗೌರವವನ್ನು ಮತ್ತಷ್ಟು ಉನ್ನತಿಗೇರಿಸಿದ್ದಾರೆ.
ಇತ್ತೀಚಿನ ಆಪರೇಷನ್ ಸಿಂಧೂರ ಏರ್ ಸ್ಟ್ರೈಕ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ಮಾಹಿತಿಯನ್ನು ಜಗತ್ತಿಗೆ ಬಿಚ್ಚಿಟ್ಟ ಕರ್ನಲ್ ಸೋಫಿಯಾ, ಬೆಳಗಾವಿಯ ಹೆಮ್ಮೆಯಾಗಿದ್ದಾರೆ. ಅವರ ಪತಿ ತಾಜುದ್ದೀನ್ ಬಾಗೇವಾಡಿ ಕೂಡ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಈ ದಂಪತಿಯ ದೇಶಭಕ್ತಿಯ ಸೇವೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಲ್ ಸೋಫಿಯಾ ಅವರ ಮಾವ ಗೌಸಸಾಬ್ ಬಾಗೇವಾಡಿ, ಅವರು ನಮ್ಮ ಸೊಸೆ ನಮ್ಮ ಊರು ಮತ್ತು ಕರ್ನಾಟಕದ ಗೌರವವನ್ನು ಹೆಚ್ಚಿಸಿದ್ದಾರೆ. ದೇಶಕ್ಕಾಗಿ ದುಡಿಯಿರಿ ಎಂದು ಮಕ್ಕಳಿಗೆ ಹೇಳಿದ್ದೆ, ಅವರೆಲ್ಲ ದೇಶ ಸೇವೆಯಲ್ಲಿ ತೊಡಗಿದ್ದಾರೆ,” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಹೇಡಿತನದ ದಾಳಿಗೆ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದೂ ತಿಳಿಸಿದ್ದಾರೆ.ಅಂದಹಾಗೇ, ಸೋಫಿಯಾ ಮೂಲತಃ ಗುಜರಾತ್‌ನ ಬರೋಡಾದವರಾಗಿದ್ದು, 2015ರಲ್ಲಿ ತಾಜುದ್ದೀನ್ ಜೊತೆ ಪ್ರೇಮ ವಿವಾಹವಾಗಿದ್ದಾರೆ. ಸದ್ಯ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿರುವ ಸೋಫಿಯಾ, ತಮ್ಮ ಆರೋಗ್ಯ ಕಾಳಜಿಯ ಸಲಹೆಗಳಿಂದ ಮಾವನಿಗೂ ಮಾರ್ಗದರ್ಶನ ನೀಡುತ್ತಾರೆ ಎಂದು ಗೌಸಸಾಬ್ ಹೇಳಿದ್ದಾರೆ.
ಗೌಸಸಾಬ್ ತಮ್ಮ ಕುಟುಂಬದ ಬಗ್ಗೆ ಹೇಳುತ್ತಾ, ‘ನಾನು ಜಮೀನಿನ ಕೆಲಸ ಮಾಡಿ ಮಕ್ಕಳನ್ನು ಓದಿಸಿದ್ದೇನೆ. ಮೂರು ಗಂಡು ಮಕ್ಕಳಲ್ಲಿ ಒಬ್ಬ ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಸೋಫಿಯಾ ಮತ್ತು ತಾಜುದ್ದೀನ್ ಇಬ್ಬರೂ ಕರ್ನಲ್ ಆಗಿ ದೇಶಕ್ಕಾಗಿ ದುಡಿಯುತ್ತಿದ್ದಾರೆ’ ಎಂದು ಹೆಮ್ಮೆಯಿಂದ ತಿಳಿಸಿದ್ದಾರೆ.
ಸೋಫಿಯಾ ಮನೆಗೆ ಬಂದಾಗ ಜವಾರಿ ಕೋಳಿ, ರೊಟ್ಟಿ, ಕಬ್ಬು ಸೇರಿದಂತೆ ಸ್ಥಳೀಯ ಆಹಾರವನ್ನು ಇಷ್ಟಪಡುತ್ತಾರೆ ಮತ್ತು ಕೊಣ್ಣೂರಿನ ನೈಸರ್ಗಿಕ ಸೌಂದರ್ಯವನ್ನು ಮೆಚ್ಚುತ್ತಾರೆ ಎಂದು ಅವರು ಹೇಳಿದ್ದಾರೆ. ಕೊಣ್ಣೂರು ಗ್ರಾಮದಲ್ಲಿ ಸೋಫಿಯಾ ಖುರೇಷಿಯವರ ಮನೆ ಬಳಿ ಸ್ಥಳೀಯರು ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿ, “ಭಾರತ ಮಾತಾಕಿ ಜೈ” ಎಂದು ಘೋಷಣೆ ಕೂಗಿದ ಗ್ರಾಮಸ್ಥರು, ಸೋಫಿಯಾ ಮತ್ತು ತಾಜುದ್ದೀನ್‌ರ ದೇಶ ಸೇವೆಗೆ ಗೌರವ ಸಲ್ಲಿಸಿದ್ದಾರೆ. “ಸೋಫಿಯಾ ಖುರೇಷಿ ಕೇವಲ ಬೆಳಗಾವಿಯ ಸೊಸೆಯಲ್ಲ, ಇಡೀ ಭಾರತದ ಹೆಮ್ಮೆ,” ಎಂದು ಸ್ಥಳೀಯರು ಹೇಳಿದ್ದಾರೆ.

