ಬೆಂಗಳೂರು : ಬೆಂಗಳೂರಿನಲ್ಲಿ ರೋಡ್ ರೇಜ್ ವಿರುದ್ದ ಸೈಲಂಟಾಗೆ ಸಮರ ಸಾರಿದ ಬೆಂಗಳೂರು ಪೊಲೀಸರು, ರೋಡ್ ರೇಜ್ ಜೊತೆಗೆ ವೀಲಿಂಗ್ ಮಾಡುವ ಪುಂಡರಿಗೆ ನಡುಕ ಹುಟ್ಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಲು ವೀಲಿಂಗ್ ಮಾಡೋರು, ರಸ್ತೆಯಲ್ಲಿ ಸುಮ್ನೆ ಸುಮ್ನೆ ಕಿರಿಕ್ ತೆಗೆದು ಹಲ್ಲೆ ಮಾಡೋದು, ಸಾಮಾಜಿಕ ಜಾಲತಾಣದಲ್ಲಿ ಬಿಲ್ಡಪ್ ಗಾಗಿ ಅವಾಚ್ಯ ಶಬ್ದಗಳಿಂದ ನಿಂದಿಸೋರನ್ನೆಲ್ಲ ಹುಡುಕಿ ಲಾಕ್ ಮಾಡುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.
ಇದಲ್ಲದೆ ಸಾಮಾಜಿಕ ಜಾಲ ತಾಣದಲ್ಲಿ ಬಿಪೋರ್ ಆಫ್ಟರ್ ವಿಡಿಯೋಗಳನ್ನು ಮಾಡಿ ಪುಂಡರ ಹಾವಳಿಗೆ ಕಡಿವಾಣ ಹಾಕಲು ಮುಂದಾದ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂಬ ಖಡಕ್ ಸಂದೇಶ ರವಾನಿದಾರೆ.
ಖಡಕ್ ಸಂದೇಶ
ನೀವೇನಾದ್ರು ಇಂತಹ ಕೃತ್ಯಗಳನ್ನ ಮಾಡಿದರೆ ಬಂಧನದ ಜೊತೆಗೆ ಬಿಪೋರ್ ಆಫ್ಟರ್ ವಿಡಿಯೋಗೆ ಒಳಗಾಗಿ ಸಿಕ್ಕಾಪಟೆ ರೋಸ್ಟ್ ಆಗೋದು ಗ್ಯಾರಂಟಿ. ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಪೊಲೀಸರು ಪುಂಡರಿಗೆ ಪಾಠ ಕಲಿಸಲು ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ.
ಸರ್ವಜಾಲಿಕರು ಸಾಮಾಜಿಕ ಜಾಲತಾಣದಲ್ಲಿ ನೀಡುವ ದೂರುಗಳಿಗೆ ಕೆಲವೇ ಗಂಟೆಗಳಲ್ಲಿ ರೆಸ್ಪಾನ್ಸ್ ಜೊತೆ ಬೆಸ್ಟ್ ರಿಸಲ್ಟ್ ನೀಡುತ್ತಿದ್ದಾರೆ. ಬೆಂಗಳೂರು ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಹೆಮ್ಮೆ ವ್ಯಕ್ತಪಡಿಸುತ್ತಿದ್ದು. ಬೆಂಗಳೂರು ಪೊಲೀಸರ ಕಾರ್ಯಕ್ಕೆ ಫಿದಾ ಆಗಿದ್ದಾರೆ.

