ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ 13ನೇ ಪಟ್ಟಾಭಿಷೇಕ ಮಹೋತ್ಸವ
ಶ್ರೀ ಮಠದಲ್ಲಿ ಶ್ರೀಗಳಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಕೆ
ನಾಣ್ಯಗಳೊಂದಿಗೆ ಶ್ರೀ ಸ್ವಾಮೀಜಿಯವರಿಗೆ ತುಲಾಭಾರ ಸೇವೆ
ಭಾರತ ಸರ್ಕಾರದ ರಕ್ಷಣಾ ಸಚಿವಾಲಯಕ್ಕೆ ₹25 ಲಕ್ಷ ದೇಣಿಗೆ
ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ 13ನೇ ಪಟ್ಟಾಭಿಷೇಕ ಮಹೋತ್ಸವದ ಶುಭ ಸಂದರ್ಭದಲ್ಲಿ, ಭಕ್ತರು, ಶಿಷ್ಯರು ಮತ್ತು ಮಂತ್ರಾಲಯದ ನಿವಾಸಿಗಳು ಮಂತ್ರಾಲಯದ ಶ್ರೀ ಮಠದಲ್ಲಿ ಶ್ರೀಗಳಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿದರು.ಭಕ್ತಿಯ ಸಂಕೇತವಾಗಿ, ಶ್ರೀ ಮಠದ ಸಿಬ್ಬಂದಿ ತಮ್ಮ ಗೌರವ ಮತ್ತು ಕೃತಜ್ಞತೆಯನ್ನು ಸಂಕೇತಿಸುವ ನಾಣ್ಯಗಳೊಂದಿಗೆ ಶ್ರೀ ಸ್ವಾಮೀಜಿಯವರಿಗೆ ತುಲಾಭಾರ ಸೇವೆಯನ್ನು ಸಲ್ಲಿಸಿದರು.
ಶ್ರೀ ಸ್ವಾಮೀಜಿಯವರು ರಾಷ್ಟ್ರದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ, ವಿಶೇಷವಾಗಿ ಪಹಲ್ಗಾಮ್ ದಾಳಿಯ ನಂತರದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ಘಟನೆಗೆ ಪ್ರತಿಕ್ರಿಯೆಯಾಗಿ ಭಾರತ ಸರ್ಕಾರ ತೆಗೆದುಕೊಂಡ ದಿಟ್ಟ ಮತ್ತು ನಿರ್ಣಾಯಕ ಕ್ರಮಗಳನ್ನು ಶ್ಲಾಘಿಸಿದರು.
ಹಾಗೇನೇ ದೇಶಭಕ್ತಿಯ ಸಂಕೇತವಾಗಿ, ಶ್ರೀ ಸ್ವಾಮೀಜಿಯವರು ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯಕ್ಕೆ ₹25 ಲಕ್ಷ ದೇಣಿಗೆಯನ್ನು ಘೋಷಿಸಿದರು

