Gokak: ಈ ಬಾರಿ ಯಾರ ತಿಪ್ಪರಲಾಗ ಹಾಕಿದರೂ ಈ ಬಾರಿ ಗೋಕಾಕ ಜಿಲ್ಲೆ ಆಗುತ್ತದೆ ಅದಕ್ಕೆ ತಮ್ಮೆಲ್ಲಾ ಸಹಕಾರ ಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ಅಮೃತ ಭಾರತ ನಿಲ್ದಾಣ ಯೋಜನೆಯಲ್ಲಿ ರೇಲ್ವೆ ಸ್ಟೇಷನ್ ಪುನರಾಭಿವೃದ್ದಿ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ
ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಈಗಾಗಲೆ ಗೋಕಾಕ ಜಿಲ್ಲೆ ಆಗಬೇಕಿತ್ತು,ಕಾರಣಾಂತರಗಳಿಂದ. ಗೋಕಾಕ ಜಿಲ್ಲೆ ಆಗಿರಲಿಲ್ಲ, ಈ ಬಾರಿ ಯಾರೆ ತಪ್ಪರಲಾಗ ಹಾಕಿದರೂ ಗೋಕಾಕ ಜಿಲ್ಲೆ ಆಗುತ್ತದೆ ಎಂದು ಹೇಳಿದರು.

