ಬೆಳಗಾವಿ: ಪ್ರೀತಿಸುವಂತೆ (Love) ಬೆನ್ನು ಬಿದ್ದಿದ್ದ ಯುವಕ ಮತ್ತು ಆತನ ಸಹೋದರನನ್ನು ಯುವತಿಯ ತಂದೆ (Father) ಕೊಲೆ ಮಾಡಿರುವ ಘಟನೆ ಸವದತ್ತಿ (Savadati) ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ಹಳೇಗೋಡಿ (22), ಮಾಯಪ್ಪ (20) ಕೊಲೆಯಾದ ಯುವಕರು. ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ ಕೊಲೆ ಆರೋಪಿ.
ಫಕೀರಪ್ಪನ ಪುತ್ರಿಯನ್ನು ಪ್ರೀತಿಸುವಂತೆ ಯಲ್ಲಪ್ಪ ಬೆನ್ನುಬಿದ್ದಿದ್ದನು. ಈ ವಿಚಾರ ತಿಳಿದ ಫಕೀರಪ್ಪ ನನ್ನ ಪುತ್ರಿಯ ತಂಟೆಗೆ ಬರಬೇಡ ಅಂತ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಫಕೀರಪ್ಪ ಹಾಗೂ ಯಲ್ಲಪ್ಪ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಯಲ್ಲಪ್ಪನಿಗೆ ಫಕೀರಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಈಜು ಕಲಿಯಲು ಹೋಗಿ ಬಾಲಕ ಸಾವು
ಮಾಯಾಪ್ಪನವರು ಜಗಳ ಬಿಡಿಸಲು ಬಂದಿದ್ದರು. ಆದರೆ ಫಕೀರಪ್ಪ ಅವರಿಗೂ ಚಾಕು ಇರಿದ್ದಾರೆ. ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಮಾಯಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್‌ನಲ್ಲಿ ಸುದ್ದಿ ಓಡಲ್ಲ: ಡಿಕೆಶಿ ತೀರುಗೇಟು
ಆರೋಪಿ ಫಕೀರಪ್ಪ ಭಾಂವಿಹಾಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಬಿಯರ್ ಮಾರಾಟದಲ್ಲಿ ಇತಿಹಾಸ ಸೃಷ್ಟಿಸಿದ ಅಬಕಾರಿ ಇಲಾಖೆ

