ಬೆಳಗಾವಿ : ವಿಪಕ್ಷ ನಾಯಕನಿಗೆ ರಕ್ಷಣೆ ಕೊಡದ ಗೃಹಸಚಿವರು ಇನ್ನು ರಾಜ್ಯದ ದಲಿತರು ಬಡವರಿಗೇನು ರಕ್ಷಣೆ ಕೊಡ್ತಾರೆ. ರಿಪಬ್ಲಿಕ್ ಆಫ್ ಕಲಬುರ್ಗಿ ಆಗಿದೆ. ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ. ನಾನು ಪೊಲೀಸ್ ಇಲಾಖೆಯಲ್ಲಿ ಇದ್ದು ಬಂದವನು. ಈ ಹಿಂದೆ ಕಾನೂನು ಸುವ್ಯವಸ್ಥೆ ಹದಗೆಟ್ಟಿರಲಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು. ಕಲಬುರ್ಗಿಯಲ್ಲಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸುದ್ದಿಗೋಷ್ಠಿ ಮಾಡಿದ ವೇಳೆ ಒಂದು ಗಾದೆ ಮಾತು ಹೇಳಿದ್ದಕ್ಕೆ ಅವರ ಮೇಲೆ ನಡೆದ ಹಲ್ಲೆ ಮಾಡಿ ಅಕ್ರಮ ಬಂಧನ ಮಾಡಿ ವಾಹನ ನಾಶಪಡಿಸಿದ ಸಂದರ್ಭದಲ್ಲಿ ಪೊಲೀಸರು ಮೌನಕ್ಕೆ ಜಾರಿರುವುದು ದುರ್ದೈವದ ಸಂಗತಿ ಎಂದರು.
ಇನ್ನು ಛಲವಾದಿ ನಾರಾಯಣಸ್ವಾಮಿ ಅವರನ್ನು ಕಲಬುರ್ಗಿಯಲ್ಲಿ ಐದು ಗಂಟೆಗಳ ಕಾಲ ಗೃಹ ಬಂಧನದಲ್ಲಿಟ್ಟಿದ್ದರು. ಖರ್ಗೆ ಅವರು ಕೈಗೊಂಬೆಯಾಗಿ ವರ್ತಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ಏಜೆಂಟ್ ತರ ವರ್ತಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಸರಕಾರಿ ವಾಹನಕ್ಕೆ ಮಸಿ ಬಳೆಯುತ್ತಾರೆ ಎಂದು ರಾಜ್ಯ ಸರಕಾರದ ವೈಫಲ್ಯ ಅಲ್ವಾ ಎಂದು ಪ್ರಶ್ನಿಸಿದರು.
ಪ್ರತಿ ಪಕ್ಷದ ನಾಯಕನಿಗೆ ರಕ್ಷಣೆ ಕೊಡಲು ಆಗದ ಡಾ. ಜಿ.ಪರಮೇಶ್ವರ ಅವರ ಇಲಾಖೆ ಇನ್ನೂ ರಾಜ್ಯದ ಬಡವರು, ದಲಿತರಿಗೆ ರಕ್ಷಣೆ ಕೊಡುತ್ತೀರಾ ? ನಾಳೆ ಬಿಜೆಪಿಯ ನಾಯಕರು ಚಲೋ ಕಲಬುರ್ಗಿ ಕರೆ ನೀಡಲಾಗಿದೆ ಎಂದರು.ಪ್ರಿಯಾಂಕ ಖರ್ಗೆ ನಿಮ್ಮ ಗುಂಡಾವರ್ತನೆ ನಡೆಯುವುದಿಲ್ಲ. ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಷ ಸರ್ಪ ಎಂದು ಕರೆದಿದ್ದರು. ಅವರಿಗೆ ನೀವು ಮಾಡಿದ ಹಾಗೆ ಮಾಡಿಸಿದರೇ ನಡೆಯುತ್ತದೆಯೇ ಎಂದು ಪ್ರಶ್ನಿಸಿದರು.
ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ರಮೇಶ ದೇಶಪಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ. ದಯಾನಂದ. ಎಂ

