ಕುಣಿಗಲ್ :-ಮೇ 30, ಕರ್ನಾಟಕ ಸರ್ಕಾರದಿಂದ ಜನ ಔಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರಕ್ಕೆ ತಾಲೂಕು ಬಿಜೆಪಿ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ, ಜನ ಔಷಧಿ ಕೇಂದ್ರದ ಮೇಲೆ ನರೇಂದ್ರ ಮೋದಿ ಫೋಟೋವನ್ನು ಕಿತ್ತು ಹಾಕಿರುವುದು ಯಾವುದೇ ರೀತಿ ಸರಿಯಲ್ಲ ಅವರ ಫೋಟೋವನ್ನು ಮತ್ತೆ ಹಾಕಬೇಕು ಎಂದು ಮಾತನಾಡಿದರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಯಕರು, ಮೆಡಿಕಲ್ ಮಾಫಿಯಾ ಜೊತೆ ಕೈಜೋಡಿಸಿ ಜನ ಔಷಧಿ ಕೇಂದ್ರವನ್ನು ಮುಚ್ಚುವುದು ಮಹಾ ಪಾಪ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು,
ಕೈಮುಗಿದು ಕೇಳಿಕೊಳ್ಳುತ್ತೇವೆ ಯಾವುದೇ ಕಾರಣಕ್ಕೂ ಬಡವರಿಗೆ ಇರುವಂತಹ ಜನ ಔಷಧಿ ಕೇಂದ್ರವನ್ನು ಮುಚ್ಚಬಾರದು ಎಂದು ತಾಲೂಕು ಬಿಜೆಪಿ ಮುಖಂಡರಾದ ಡಿ, ಕೃಷ್ಣಕುಮಾರ್ ತಿಳಿಸಿದರು, ಜನೌಷಧಿ ಕೇಂದ್ರವನ್ನು ಮುಚ್ಚಿದರೆ ಕಾರ್ಯಕರ್ತರು ಬೀದಿಗಿಳಿದು ರಾಜ್ಯದಾದ್ಯಂತ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು,,
ಬಡ ಮಧ್ಯಮ ವರ್ಗದ ಜನತೆಗೆ ಸಂಕಟ :
ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರವು ಆದೇಶಿಸಿದ್ದು ಇದರಿಂದ ಸಾಮಾನ್ಯ ಕೊಡ ಜನತೆಗೆ ಅತ್ಯಂತ ರಿಯಾಯಿತಿ ದರಗಳಲ್ಲಿ ದೊರಕುತ್ತಿದ್ದ ಔಷಧಿಗಳು, ಈಗ ಜನವಿರೋಧಿ ಸರ್ಕಾರದ ನೀತಿಯಿಂದಾಗಿ ಬಡ,ಮಧ್ಯಮ ವರ್ಗದ ಜನತೆಗೆ ಸಂಕಟ ತಂದೊಡ್ಡಿದೆ ಎಂದು ತಾಲೂಕು ಬಿಜೆಪಿ ಮುಖಂಡರಾದ ಡಿ ಕೃಷ್ಣಕುಮಾರ್ ರವರು ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು,,
ರಾಜ್ಯದ 200 ಕ್ಕೂ ಅಧಿಕ ಜನ ಔಷಧಿ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ವಾರ್ಷಿಕ 40 ಕೋಟಿ ರೂ ಉಳಿತಾಯವಾಗುತ್ತದೆ ಎಂದು ತಿಳಿಸಿದರು,,
ಸಾಮಾನ್ಯ ಜನತೆಯ ಜೀವನದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ ಹಾಡುತ್ತಿರುವುದು ಯಾವುದೇ ರೀತಿ ಸರಿಯಲ್ಲ, ಬಡ ಕುಟುಂಬಗಳಿಗೂ ಹೊಡೆತ ನೀಡಿದಂತಾಗಿದೆ, ಕೂಡಲೇ ಈ ನಿರ್ಧಾರವನ್ನು ಮರುಪರಿಶೀಲಿಸಿ ಈ ಆದೇಶವನ್ನು ಹಿಂಪಡೆದು ನಾಡಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಬಿಜೆಪಿ ಮುಖಂಡರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ,,
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಾತ್ರ ಜನ ಔಷಧಿ ಕೇಂದ್ರಗಳಿಗೆ ನಿರ್ಬಂಧಿಸಲಾಗಿದೆ, ಬೇರೆ ಸ್ಥಳಗಳಲ್ಲಿ ಇರುವ ಜನ ಔಷಧಿ ಕೇಂದ್ರಗಳಲ್ಲಿ ಸಾರ್ವಜನಿಕರು ಔಷಧಿಗಳನ್ನು ಪಡೆಯಬಹುದಾಗಿದೆ, ಬಡವರು ಮಧ್ಯಮ ವರ್ಗದವರಿಗಾಗಿಯೇ ಸಾವಿರಾರು ಕೋಟಿ ರೂ ಖರ್ಚು ಮಾಡಿ, ಸನ್ಮಾನ್ಯ ನರೇಂದ್ರ ಮೋದಿಯವರು ಔಷಧಿಗಳನ್ನು ಖರೀದಿಸಿ ಉಚಿತವಾಗಿ ನೀಡುತ್ತಿರುವಾಗ, ಅದರ ಸದ್ಬಳಕೆಯಾಗಬೇಕು ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ, ಎಂದು ಮಾತನಾಡಿದರು,,
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ, ಡಿ ಕೃಷ್ಣಕುಮಾರ್, ಕೆ ಎಸ್ ಬಲರಾಮ್, ತಾಲೂಕು ಬಿಜೆಪಿ ಅಧ್ಯಕ್ಷ ದಿನೇಶ್,ಆನಂದ್ (ಕಾಂಬ್ಳೆ), ಜೆಡಿಎಸ್ ಮುಖಂಡ ಪ್ರಮೋದ್, ಬೇಗೂರು ಶಿವರಾಂ, ಆನಂದ್, ಜಗದೀಶ್, ಇನ್ನು ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು,,
ವರದಿ : ನರಸಿಂಹರಾಜು

