ತುಮಕೂರು : ಉದ್ದಿಮೆದಾರರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತುಮಕೂರು ನಗರವನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಮಟ್ಟದ ಉದ್ಯಮಿ ಮಿತ್ರ ಸಹಕಾರ ಸಂಘ ನಿಯಮಿತ ಸ್ಥಾಪನೆ ಮಾಡಲಾಗಿದೆ ಎಂದು ಉದ್ಯಮಿತ್ರ ಸಹಕಾರ ಸಂಘದ ಮುಖ್ಯ ಪ್ರವರ್ತಕ ಸಂತೋಷ್ ಕುಮಾರ್ ಹೆಚ್ ಎನ್,ತಿಳಿಸಿದರು,,
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸದಾಗಿ ಉದ್ಯಮಿ ಆರಂಭಿಸುವ ಯುವ ಜನರಿಗೆ ಜ್ಞಾನದ ಕೊರತೆಯಿಂದ ಕೆಲವಷ್ಟು ದಿನ ಉದ್ಯಮಿ ನಡೆಸಿ, ಬಂಡವಾಳ ಹೂಡಿಕೆ ಸಂಪನ್ಮೂಲ ಕ್ರೂಡೀಕರಣ, ಮಾರುಕಟ್ಟೆ ಇನ್ನಿತರ ಸಮಸ್ಯೆಗಳನ್ನು ಎದುರಿಸಲಾಗದೆ, ಅರ್ಧಕ್ಕೆ ಕೈ ಬಿಡುವ ಪ್ರಸಂಗಗಳೇ ಇಲ್ಲಿ ಹೆಚ್ಚಾಗಿವೆ, ಅಂತಹ ಸವಾಲುಗಳನ್ನು ನಾವುಗಳು ಸಮರ್ಥವಾಗಿ ಎದುರಿಸಲು ಬೇಕಾದ ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವ ನಿಟ್ಟಿನಲ್ಲಿ ಈ ಉದ್ಯಮಿತ್ರ ಸಹಕಾರ ಸಂಘ ಪ್ರಯತ್ನ ಪಡುತ್ತಿದೆ ಎಂದರು,
ಉದ್ಯಮಿತ್ರ ಸಹಕಾರಿ ಸಂಘ ಕೇವಲ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಸೊಸೈಟಿಯಲ್ಲ, ಉದ್ದಿಮೆದಾರರು,ವ್ಯಾಪಾರಸ್ಥರು,ಮಾರಾಟಗಾರರು, ಏಜೆಂಟರುಗಳ ಬಹುತೇಕ ಹಂತದ ಸೇವೆಯನ್ನು ಉದ್ಯಮಿದಾರರಿಗೆ ಒದಗಿಸಿ, ಯುವಜನರ ಬೆನ್ನೆಲುಬಾಗಿ ಕೆಲಸ ಮಾಡಲಿದೆ, ತುಮಕೂರಿನ ರೆಡ್ ಕ್ರಾಸ್ ಭಾವನಾದಲ್ಲಿ ಮುಖ್ಯ ಕಚೇರಿಯು ಸಹ ಇದ್ದು ರಾಜ್ಯದ ನಾಲ್ಕು ವಿಭಾಗದಲ್ಲಿಯೂ ಸಂಪರ್ಕ ಕಚೇರಿಯನ್ನು ಹೊಂದಿದೆ, ಪ್ರಸ್ತುತ 250 ಜನ ಸದಸ್ಯರಿದ್ದು ಈ ಸಂಖ್ಯೆಯನ್ನು 10,000ಕ್ಕೆ ಹೆಚ್ಚಿಸುವ ಗುರಿ ಸಂಸ್ಥೆ ಹೊಂದಿದೆ ಎಂದು ಸಂತೋಷ್ ಕುಮಾರ್ ತಿಳಿಸಿದರು,,
ಉದ್ದಿಮೆದಾರರು ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಕಾರ್ಯ ಕಾರ್ಯಗಳನ್ನು ಏರ್ಪಡಿಸುವ ಮೂಲಕ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಂ ಎಸ್ ಎಮ್ ಇ ಹಾಗೂ, ಇನ್ನಿತರ ಯೋಜನೆಗಳ ಅಡಿಯಲ್ಲಿ ಹೇಗೆ ಸಾಲ ಸೌಲಭ್ಯ ಪಡೆಯಬಹುದು ಎಂಬುದನ್ನು ಸಹ ಯುವ ಉದ್ದಿಮೆದಾರರಿಗೆ ಜಾಗೃತಿ ಮೂಡಿಸಲಾಗುವುದು, ಸ್ಟಾರ್ಟ್ ಆಫ್ ಗಳ ಪ್ರಾರಂಭ ಹಣಕಾಸಿನ ನೆರವು, ನೀಡಲಾಗುವುದು ಅಸಂಗಟಿತ ವಲಯದ ಸ್ವಯಂ ಉದ್ಯೋಗಿಗಳು, ಯುವ ಉದ್ದಿಮೆದಾರರು, ಗ್ರಾಮೀಣ ಉದ್ಯಮಿಗಳು, ಉದ್ದಿಮೆದಾರರು ಸಹ ನಮ್ಮ ಸಹಕಾರಿ ಸಂಘದಲ್ಲಿ 1150 ರೂ ನೀಡಿ, ಸದಸ್ಯತ್ವ ಪಡೆದುಕೊಳ್ಳಬಹುದು, ಸದಸ್ಯರಿಗೆ ಯಶಸ್ವಿನಿ ಸೇರಿದಂತೆ ಸರ್ಕಾರ ಸೌಲಭ್ಯಗಳ ಲಭ್ಯವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸಂತೋಷ್ ಕುಮಾರ್ ಮನವಿ ಮಾಡಿದರು,,
ಈ ಕಾರ್ಯಕ್ರಮದಲ್ಲಿ ಉದ್ಯಮಿತ್ರ ಸಹಕಾರ ಸಂಘದ ಪ್ರವರ್ತಕರಾದ, ಅಜ್ಜಯ್ಯ, ರಾಮಮೂರ್ತಿ,ಮಹೇಶ್, ವಿಜಯ್ ಕುಮಾರ್, ರಾಜಪ್ಪ,ರಘುಪತಿ, ಮಹೇಶ್, ಚಂದ್ರಮೋಹನ್,ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು,,
ವರದಿ ನರಸಿಂಹರಾಜು ಸಂಪೂರ್ಣ ನ್ಯೂಸ್
ತುಮಕೂರು

