ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನ ಲಗೇಜ್ ರೂಲ್ಸ್ ಬಿಡುಗಡೆ ಮಾಡಿದ್ದು, ಈ ನಿಯಮದ ಪ್ರಕಾರ, ಕೆಎಸ್ಆರ್ಟಿಸಿ ಬಸ್ನಲ್ಲಿ ಮೂವತ್ತು ಕೆಜಿಯವರೆಗೂ ಪ್ರಯಾಣಿಕರು ಉಚಿತವಾಗಿ ಲಗೇಜು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ.
30 ಕೆಜಿ ಮೇಲೆ ಲಗೇಜ್ ಇದ್ದರೆ ಹಣ ಪಾವತಿ ಮಾಡಬೇಕಿದೆ. 40 ಕೆಜಿ ತೂಕವಿರುವ ವಾಷಿಂಗ್ ಮಿಷಿನ್, ಫ್ರಿಡ್ಜ್, 25 ಕೆಜಿ ತೂಕದ ಖಾಲಿ ಕಂಟೈನರ್ ಬಸ್ನಲ್ಲಿ ಸಾಗಿಸಲೂ ಅವಕಾಶ ನೀಡಲಾಗಿದೆ.
ಕೆಎಸ್ಆರ್ಟಿಸಿ ಹೊಸ ನಿಯಮದ ಪ್ರಕಾರ, ಕಬ್ಬಿಣ ಪೈಪ್ ಮೋಟಾರ್ಗಳನ್ನೂ ಸಾಗಿಸಬಹುದು ಎನ್ನಲಾಗಿದೆ. ಮೊಲ, ನಾಯಿ ಮರಿ, ಬೆಕ್ಕು, ಪಕ್ಷಿಯನ್ನೂ ಸಾಗಿಸಬಹದು. ನಾಯಿಯನ್ನು ಸಾಗಿಸಬಹುದು. ನಾಯಿಯನ್ನು ಚೈನ್ನಲ್ಲಿ ಬಿಗಿದು ಕಾಳಜಿಯೊಂದಿಗೆ ಬಸ್ನಲ್ಲಿ ಸಾಗಿಸಬಹುದು.
ವಯಸ್ಕರು 30 ಕೆಜಿ, ಮಕ್ಕಳು 15 ಕೆಜಿ ತೂಕದ ಲಗ್ಗೇಜ್ ಬಸ್ಸಿನಲ್ಲಿ ಕೊಂಡೊಯ್ಯಬಹುದು. ನಾಲ್ಕೈದು ಜನರು ಒಟ್ಟಾಗಿ ಪ್ರಯಾಣಿಸಿದರೂ 30 ಕೆಜಿ ಲಗೇಜ್ ಮಾತ್ರ ಉಚಿತ ಎನ್ನಲಾಗಿದೆ.
30 ಕೆಜಿ ವರೆಗೆ ಲಗೇಜ್ ಕೊಂಡೊಯ್ಯಲು ಉಚಿತ ಅವಕಾಶ. ಅದಕ್ಕಿಂತ ಹೆಚ್ಚಿನ ಲಗೇಜ್ಗೆ ದರ ನಿಗದಿ.ವಾಷಿಂಗ್ ಮಷಿನ್, ಫ್ರಿಡ್ಜ್ ಕೊಂಡೊಯ್ಯಲೂ ಅವಕಾಶ.ಟ್ರಕ್ನ ಟಯರ್ಗಳನ್ನೂ ತೆಗೆದುಕೊಂಡು ಹೋಗಬಹುದು.ಅಲ್ಯೂಮಿನಿಯಂ ಪೈಪ್, ಪಾತ್ರೆ ಕೊಂಡೊಯ್ಯಲೂ ಅವಕಾಶ.
ಕಬ್ಬಿಣದ ಪೈಪ್ಗಳನ್ನು ಸಾಗಿಸಲೂ ಅವಕಾಶ.ಬೆಕ್ಕು, ನಾಯಿ, ಮೊಲವನ್ನೂ ಸಾಗಿಸಬಹುದು.

