ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಮಿತಿಮೀರಿದೆ.. ದನ-ಕರುಗಳನ್ನ ಬಿಡ್ತಿಲ್ಲ.. ತಿಂದು ತೇಗುತ್ತಿವೆ.. ಇದ್ರ ಮಧ್ಯೆ ಈಗ ನಾಯಿಗಳನ್ನು ಬಿಡದೆ ರಕ್ತ ಹೀರುತ್ತಿವೆ.. ಕನಕಪುರ ತಾಲೂಕಿನ ತೋಟಹಳ್ಳಿಯಲ್ಲಿ ಮನೆಯೊಂದರಲ್ಲಿದ್ದ ನಾಯಿಯನ್ನ ಕೊಂದು ಚಿರತೆ ಎಳೆಯೊಯ್ದಿದೆ.. ನಾಯಿ ತಪ್ಪಿಸಿಕೊಳ್ಳಲು ಎಷ್ಟೆ ಪ್ರಯತ್ನ ಪಟ್ಟರೂ ಆಗ್ಲಿಲ್ಲ.. ಚಿರತೆ ನಾಯಿ ಕತ್ತಿಗೆ ಬಾಯಿ ಹಾಕಿ ರಕ್ತ ಹೀರಿದೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ..

