ನವದೆಹಲಿ : ಬಿಹಾರದ ಸಸಾರಾಮ್‌ನಲ್ಲಿ ನಡೆದ ವಿರೋಧ ಪಕ್ಷದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಶುಕ್ರವಾರ ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯು ಆರ್‌ಎಸ್‌ಎಸ್ ಅನ್ನು ಹೊಗಳಿದ್ದಕ್ಕಾಗಿ ವಾಗ್ದಾಳಿ ನಡೆಸಿದರು. ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕದ ಹೊರತು, ಜನರ ಮತಗಳು, ಹಕ್ಕುಗಳು ಮತ್ತು ಸ್ವಾತಂತ್ರ್ಯ ಸುರಕ್ಷಿತವಾಗಿಲ್ಲ ಎಂದು ಖರ್ಗೆ ಹೇಳಿದರು.
ಮುಂದುವರೆದು ಮಾತನಾಡಿದ ಖರ್ಗೆ, RSSನವರು ಯಾರೂ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜೈಲಿಗೆ ಹೋಗಿಲ್ಲ. RSSನಲ್ಲಿದ್ದ ಜನರು ಬ್ರಿಟಿಷ್ ಸರ್ಕಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. RSS ಕಾರ್ಯಕರ್ತರು ಬ್ರಿಟಿಷರೊಂದಿಗೆ ಇರುವುದಾಗಿ ಹೇಳುತ್ತಿದ್ದರು. ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ಅಂತಹ ಜನರ ಹೆಸರುಗಳನ್ನು ಹೇಳುತ್ತಿದ್ದರೇ, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಆತ್ಮಗಳು, ಇಂದು ಏನು ಹೇಳುತ್ತಿರಬಹುದು? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ನಿಮ್ಮ ಮತಗಳನ್ನು, ಯುವಕರ ಉದ್ಯೋಗಗಳನ್ನು, ರೈತರ ಕನಿಷ್ಠ ಬೆಂಬಲ ಬೆಲೆಯನ್ನು ಮತ್ತು ನಿಮ್ಮ ಹಕ್ಕುಗಳನ್ನು ಕದಿಯುತ್ತಾರೆ. ಮೋದಿ ಒಬ್ಬ ಕಳ್ಳ ಮತ್ತು ಆ ಕಳ್ಳನನ್ನು ಅಧಿಕಾರದಿಂದ ತೆಗೆದುಹಾಕುವುದು ಅವಶ್ಯಕ ಎಂದು ಮೋದಿ ವಿರುದ್ಧ ಖರ್ಗೆ ಟೀಕಾಪ್ರಹಾರ ನಡೆಸಿದ್ದಾರೆ.

