ಮೈಸೂರು: ದರ್ಶನ್ ಜೈಲು ಪಾಲಾಗಿದ್ದರೂ ಮೈಸೂರು ನಂಟನ್ನು ಅವರ ಪತ್ನಿ ವಿಜಯಲಲ್ಷ್ಮೀ ಮರೆಯದಿರುವುದು ವಿಶೇಷವಾಗಿದೆ. ದರ್ಶನ್ ಅನುಪಸ್ಥಿತಿಯಲ್ಲೂ ದಸರಾ ಆನೆ ಮಾವುತರ ಕುಟುಂಬಕ್ಕೆ ಉಡುಗೊರೆ ನೀಡಿ, ಭರ್ಜರಿ ಊಟ ಹಾಕಿಸಿದ್ದಾರೆ.
ವಿಜಯಲಕ್ಷ್ಮೀ ಮಾವುತರ 60 ಕುಟುಂಬಕ್ಕೆ ಕುಕ್ಕರ್ ಉಡುಗೊರೆ ನೀಡಿದ್ದಾರೆ. ಅಲ್ಲದೇ ಭೋಜನದ ವ್ಯವಸ್ಥೆ ಮಾಡಿಸಿದ್ದಾರೆ. ಈ ವೇಳೆ ಮೈಸೂರಿನ ದಸರಾ ಆನೆ ನೋಡಿ ಸಂತಸ ಪಟ್ಟು, ಮಾವುತರಿಗೆ ಕೈಯ್ಯಾರೆ ಕುಕ್ಕರ್ ನೀಡಿದ್ದಾರೆ.
ವಿಜಯಲಕ್ಷ್ಮಿಯವರ ಈ ಕೆಲಸಕ್ಕೆ ನಟ ಧನ್ವಿರ್ ಸಾಥ್ ನೀಡಿದ್ದಾರೆ. ಈ ಹಿಂದೆ ದರ್ಶನ್ ಅನೇಕ ಬಾರಿ ಮೈಸೂರಿಗೆ ಭೇಟಿ ನೀಡಿ ಮಾವುತರಿಗೆ ಸಹಾಯ ಮಾಡಿದ್ದರು. ಅಂತೆಯೇ ಇದೀಗ ಆ ಪರಂಪರೆಯನ್ನು ಅವರ ಪತ್ನಿ ವಿಜಯಲಕ್ಷ್ಮೀ ಮುಂದುವರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ ಅವರು ಸಹ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನೋಡಿ ಖುಷಿ ಪಟ್ಟರು.

