ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ನಡೆದ ವಿಜಯ ದಳಪತಿ ನೇತೃತ್ವದ ಟಿವಿಕೆ ಪಕ್ಷದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 30ಕ್ಕೂ ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೂಲಗಳ ಪ್ರಕಾರ ಕಾಲ್ತುಳಿತದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ರ್ಯಾಲಿಯ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನಸಮೂಹದ ಒಂದು ಭಾಗ ಮುಂದಕ್ಕೆ ಬಂದ ನಂತರ ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಯಿತು. ಮಕ್ಕಳು ಸೇರಿದಂತೆ ಹಲವಾರು ಹಾಜರಿದ್ದವರು. ಈ ವೇಳೆ ಕಾಲ್ತುಳಿತ ಸಂಭವಿಸುತ್ತಿದ್ದಂತೆ ಜನದಟ್ಟಣೆಯಲ್ಲಿ ಹಲವರು ಮೂರ್ಛೆ ಹೋದ್ರು. ಈ ವೇಳೆ 10 ಮಂದಿ ಸ್ಥಳದ್ಲಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಒಂಬತ್ತು ವರ್ಷದ ಬಾಲಕಿ ಕಾಣೆಯಾಗಿದ್ದಾಳೆಂದು ವರದಿಯಾಗಿದೆ.
ಮೃತ ವಯಸ್ಕರು, ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬೆಂಬಲಿಗರಾಗಿದ್ದರು. ರ‍್ಯಾಲಿಗಾಗಿ ಕನಿಷ್ಠ ಆರು ಗಂಟೆಗಳ ಕಾಲ ಕಾದಿದ್ದರು. ಸ್ಥಳಕ್ಕೆ ರ‍್ಯಾಲಿ ತಡವಾಗಿ ಬಂದಿತು. ಹೀಗಾಗಿ, ಹೆಚ್ಚಿನ ಜನಸಂದಣಿಯಾಗಿ ಕಾಲ್ತುಳಿತ ಸಂಭವಿಸಿದೆ.
ಟಿವಿಕೆ ಪಕ್ಷದ ನಾಯಕ ವಿಜಯ್ ದಳಪತಿ ಇಂದು ನಮಕ್ಕಲ್ ನಲ್ಲಿ ಪ್ರಚಾರ ನಡೆಸಿದ್ರು. ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಶನಿವಾರ ಪ್ರಚಾರ ನಡೆಸುತ್ತಿರುವ ವಿಜಯ್ ಇಂದು ನಮಕ್ಕಲ್ ನಲ್ಲಿ ಪ್ರಚಾರ ನಡೆಸಿದ್ರು. ಅದಾದ ನಂತರ ಕರೂರಿನ ಪಕ್ಕದಲ್ಲಿರುವ ವೇಲುಚಾಮಿಪುರಂನಲ್ಲಿ ಪ್ರಚಾರ ನಡೆಸಿದ್ರು. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಪ್ರಚಾರ ಮಾಡಿದ ಸ್ಥಳದಲ್ಲಿಯೇ ವಿಜಯ್ ಪ್ರಚಾರ ನಡೆಸಿದ್ರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಈ ರ್ಯಾಲಿಯು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ವಿಜಯ್ ಅವರ ಪ್ರಚಾರದ ಭಾಗವಾಗಿತ್ತು.

