ಮುಂಬೈ ಕಾಂತಾರ ಸಿನೆಮಾದ ಕ್ರೆಜ್ ಇಡೀ ದೇಶಕ್ಕೆ ಹಬ್ಬಿದೆ. ಕರ್ನಾಟಕದ ಜೊತೆಗೆ ಇದೀಗ ಬಾಲಿವುಡ್ ನಲ್ಲೂ ಕಾಂತಾರ ಚಾಪ್ಟರ್ 1 ರ ಹವಾ ಜೋರಾಗಿದೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಿಂದ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಹಿಂದಿಯಲ್ಲೂ ಸದ್ದು ಮಾಡಿತ್ತು.
ತಡವಾಗಿ ಹಿಂದಿಗೆ ಡಬ್ ಆಗಿ ರಿಲೀಸ್ ಮಾಡಿದರೂ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಏಕಕಾಲಕ್ಕೆ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಮಾಡಲಾಗಿದೆ. ಪರಭಾಷೆಯ ಮಂದಿ ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲತಃ ಕನ್ನಡದ ಚಿತ್ರ. ಹಾಗಾಗಿ, ಕನ್ನಡದಲ್ಲಿ ಈ ಚಿತ್ರ ಮೇಲುಗೈ ಸಾಧಿಸಬೇಕು. ಅಚ್ಚರಿ ಎಂದರೆ, ಕನ್ನಡದ ಕಲೆಕ್ಷನ್ಗಿಂತ ಹಿಂದಿ ಕಲೆಕ್ಷನ್ ಹೆಚ್ಚಿದೆ ಅನ್ನೋದು ವಿಶೇಷ. 9 ದಿನಗಳಲ್ಲಿ ಕನ್ನಡದಲ್ಲಿ 114 ಕೋಟಿ ರೂಪಾಯಿ ಕಲೆಕ್ಷನ್ ಆದರೆ, ಹಿಂದಿಯಲ್ಲಿ 116 ಕೋಟಿ ರೂಪಾಯಿ ಗಳಿಕೆ ಆಗಿದೆ.
ರಿಷಬ್ ಶೆಟ್ಟಿ ಅವರು ಮಂಬೈನ ‘ಗೆಯಟಿ ಗ್ಯಾಲಕ್ಸಿ’ ಥಿಯೇಟರ್ಗೆ ತೆರಳಿದ್ದಾರೆ. ಅವರು ಕಾರಿನಲ್ಲಿ ಬರುವಾಗ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಲಾಗಿದೆ. ಇದು ರಿಷಬ್ ಶೆಟ್ಟಿಗೆ ಸಿಕ್ಕ ನಿಜವಾದ ಗೆಲುವು ಎಂದು ಅನೇಕರು ಹೇಳಿದ್ದಾರೆ. ಮುಂಬೈ ಜನತೆ ತೋರಿದ ಪ್ರೀತಿಗೆ ಅವರ ಹೃದಯ ತುಂಬಿ ಬಂದಿದೆ.

