ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ‘ಕಿಂಗ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಶಾರುಖ್ ಖಾನ್ ಅವರು ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ಟೀಸರ್ನಲ್ಲೇ ಸುಳಿವು ಸಿಕ್ಕಿದೆ. ಕಿಂಗ್ ಸಿನಿಮಾದ ಟೀಸರ್ ಈಗ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಜೊತೆ ‘ಪಠಾಣ್’ ಸಿನಿಮಾ ಮಾಡಿ ಬಹುದೊಡ್ಡ ಹಿಟ್ ನೀಡಿದ್ದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈಗ ‘ಕಿಂಗ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಬಾರಿ ಶಾರುಖ್ ಖಾನ್ ಅವರನ್ನು ಭಾರಿ ರಗಡ್ ಅವತಾರದಲ್ಲಿ ತೋರಿಸಲು ಸಿದ್ದಾರ್ಥ್ ಆನಂದ್ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಂದ ಕಿಂಗ್ ಸಿನಿಮಾದ ಟೀಸರ್ಗೆ ಮೆಚ್ಚುಗೆ ಸಿಕ್ಕಿದೆ.
‘ಕಿಂಗ್’ ಚಿತ್ರದ ಟೀಸರ್ನಲ್ಲಿ ಶಾರುಖ್ ಖಾನ್ ಅವರ ಫಸ್ಟ್ ಲುಕ್ ಬಹಿರಂಗ ಆಗಿದೆ. ಸ್ವತಃ ಶಾರುಖ್ ಖಾನ್ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ಎಚ್ಚರಿಕೆ ವಹಿಸಿ ಅವರು ಈ ಸ್ಕ್ರಿಪ್ಟ್ ಆಯ್ಕೆ ಮಾಡಿದ್ದಾರೆ. ಯಾವುದೇ ಅವಸರ ಇಲ್ಲದೇ ಸಾಕಷ್ಟು ಸಮಯ ನೀಡಿ ಸಿನಿಮಾ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ‘ಕಿಂಗ್’ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ನಟ ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾ ಬಳಿಕ ಗ್ಯಾಪ್ ತೆಗೆದುಕೊಂಡರು. ಈಗ ಅವರು ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

