ಮೈಸೂರು : ದೀಪಾವಳಿ ಸಂಭ್ರಮದ ಮಧ್ಯೆ ಸಂಸದ ಯದುವೀರ್ಟೆಂ ಪಲ್ ರೌಂಡ್ಸ್ ಮಾಡಿದ್ದಾರೆ. ಪಿರಿಯಾಪಟ್ಟಣದಲ್ಲಿಭಕ್ತರ ಜೊತೆ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನೇರಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವರ ದರ್ಶನ ನಡೆದಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಮೈಸೂರಿನ ಯದುವಂಶದ ರಾಜ ಮಹಾರಾಜರು ಅನೇಕ ತಲೆಮಾರುಗಳಿಂದ ಇಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ನಡೆಯಲಿರುವ ದೀವಟಿಗೆ ಉತ್ಸವದಲ್ಲಿ ಯದುವೀರ್ ಭಾಗಿಯಾಗಿದ್ದಾರೆ. ದೀವಟಿಗೆ ಉತ್ಸವದ ಹಿನ್ನೆಲೆಯಲ್ಲಿ ಬೆಳಿಗ್ಗೆ 6:30ಕ್ಕೆ ಭಕ್ತರ ಜೊತೆ ಬೆಟ್ಟವನ್ನೇರಿದ ಯದುವೀರ್ ಒಡೆಯರ್, ಅರ್ಧ ಗಂಟೆಗೂ ಹೆಚ್ಚು ಕಾಲ ದೇಗುಲದಲ್ಲಿ ಕಾಲ ಕಳೆದಿದ್ದಾರೆ.ಸುಮಾರು 3600 ಮೆಟ್ಟಿಲುಗಳನ್ನು ಹೊಂದಿರುವ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟವನ್ನು ಸಾಮಾನ್ಯರಂತೆ ಏರಿ ಯದುವೀರ್ ಸರಳತೆ ಮೆರೆದಿದ್ದಾರೆ.
ಯದುವೀರ್ ಜತೆ ಇತರೆ ಭಕ್ತಾದಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದು, ಯದುವೀರ್ ಶಾಂತವಾಗಿ ಎಲ್ಲರ ಜತೆ ಮಾತಾಡುತ್ತಾ ಬೆಟ್ಟ ಹತ್ತಿ ಮಲ್ಲಿಕಾರ್ಜುನಸ್ವಾಮಿಯ ದರ್ಶನ ಪಡೆದಿದ್ದಾರೆ.

