By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಕನ್ನಡತಿ ಭೂಮಿ ಶೆಟ್ಟಿ ಅಭಿನಯಿಸುತ್ತಿರುವ ತೆಲುಗು ಸಿನಿಮಾನಲ್ಲಿ ‘ಧುರಂಧರ್’ ಖ್ಯಾತಿಯ ಅಕ್ಷಯ್ ಖನ್ನಾ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - Entertainment - ಕನ್ನಡತಿ ಭೂಮಿ ಶೆಟ್ಟಿ ಅಭಿನಯಿಸುತ್ತಿರುವ ತೆಲುಗು ಸಿನಿಮಾನಲ್ಲಿ ‘ಧುರಂಧರ್’ ಖ್ಯಾತಿಯ ಅಕ್ಷಯ್ ಖನ್ನಾ

EntertainmentLatestಸ್ಯಾಂಡಲ್​ವುಡ್-Sandalwood

ಕನ್ನಡತಿ ಭೂಮಿ ಶೆಟ್ಟಿ ಅಭಿನಯಿಸುತ್ತಿರುವ ತೆಲುಗು ಸಿನಿಮಾನಲ್ಲಿ ‘ಧುರಂಧರ್’ ಖ್ಯಾತಿಯ ಅಕ್ಷಯ್ ಖನ್ನಾ

Akshay Khanna of ‘Dhurandhar’ fame to star in Telugu film starring Kannada actress Bhumi Shetty

Published January 2, 2026
Share
2 Min Read
Akshay Akshay Akshay
SHARE

ಮುಂಬೈ/ಹೈದರಾಬಾದ್: ದಶಕಗಳಿಂದ ಬಾಲಿವುಡ್ ಚಿತ್ರರಂಗದಲ್ಲಿದ್ದರೂ ಮಿತವಾದ ಆಯ್ಕೆಗಳ ಮೂಲಕ ಗಮನ ಸೆಳೆದಿದ್ದ ನಟ ಅಕ್ಷಯ್ ಖನ್ನಾ, ಇತ್ತೀಚಿನ ‘ಧುರಂಧರ್’ ಸಿನಿಮಾ ಮೂಲಕ ಏಕಾಏಕಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅಕ್ಷಯ್ ಖನ್ನಾ ಅವರ ಬೇಡಿಕೆ ಹಠಾತ್ತನೇ ಹೆಚ್ಚಾಗಿದ್ದು, ಸಂಭಾವನೆಯೂ ದುಪ್ಪಟ್ಟಾಗಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಅವರು ಕೆಲ ದೊಡ್ಡ ಬಾಲಿವುಡ್ ಸ್ಟಾರ್ ನಟರ ಸಿನಿಮಾಗಳನ್ನೇ ಕೈಬಿಡುತ್ತಿರುವುದು ಗಮನಾರ್ಹವಾಗಿದೆ. ಇದೇ ನಡುವೆ, ಇದೀಗ ಅವರು ಕನ್ನಡತಿ ನಟಿ ಭೂಮಿ ಶೆಟ್ಟಿ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಕುಂದಾಪುರ ಮೂಲದ ಭೂಮಿ ಶೆಟ್ಟಿ, ಕನ್ನಡದ ‘ಇಕ್ಕಟ್’ ಸಿನಿಮಾದ ಮೂಲಕ ನಟನಾ ಬದುಕು ಆರಂಭಿಸಿದ್ದರು. ಬಳಿಕ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರುವ ಅವರು, ಪ್ರಸ್ತುತ ‘ಮಹಾಕಾಳಿ’ ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಅಕ್ಷಯ್ ಖನ್ನಾ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು ಈಗಾಗಲೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಚಿತ್ರದ ನಿರ್ದೇಶಕಿ ಪೂಜಾ ಕೊಲ್ಲೂರು ಅವರು ಅಕ್ಷಯ್ ಖನ್ನಾ ಜೊತೆಗಿನ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೆಸರೇ ಸೂಚಿಸುವಂತೆ ‘ಮಹಾಕಾಳಿ’ ಒಂದು ಫಿಕ್ಷನಲ್ ಸಿನಿಮಾ ಆಗಿದ್ದು, ಅಕ್ಷಯ್ ಖನ್ನಾ ಅವರು ವಿಶ್ವಾಮಿತ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶ್ವಾಮಿತ್ರನ ಪಾತ್ರ ಸಿನಿಮಾದ ಅತ್ಯಂತ ಮಹತ್ವದ ಪಾತ್ರಗಳಲ್ಲಿ ಒಂದಾಗಿದೆ. ಈ ಕುರಿತು ಮಾತನಾಡಿದ ನಿರ್ದೇಶಕಿ ಪೂಜಾ ಕೊಲ್ಲೂರು, “ಈ ಪಾತ್ರವನ್ನು ಹೀರೋ ಅಥವಾ ವಿಲನ್ ಎಂದು ನಿರ್ಧರಿಸಲಾಗುವುದಿಲ್ಲ. ಎರಡಕ್ಕಿಂತಲೂ ಭಿನ್ನವಾದ ವ್ಯಕ್ತಿತ್ವ ಈ ಪಾತ್ರದ್ದಾಗಿದ್ದು, ಅದಕ್ಕಾಗಿ ಅಕ್ಷಯ್ ಖನ್ನಾ ಅವರಂತಹ ಅದ್ಭುತ ನಟರನ್ನು ಆಯ್ಕೆ ಮಾಡಿಕೊಂಡಿದ್ದೇವೆ,” ಎಂದು ಹೇಳಿದ್ದಾರೆ. ಅಕ್ಷಯ್ ಖನ್ನಾ ಅವರ ದೃಶ್ಯಗಳನ್ನು ಮುಂಬೈನಲ್ಲಿಯೇ ಚಿತ್ರೀಕರಿಸಲಾಗಿದೆ.

ಈ ಹಿಂದೆ ‘ಹನುಮ್ಯಾನ್’ ಸಿನಿಮಾ ಮೂಲಕ ಭಾರೀ ಯಶಸ್ಸು ಕಂಡ ನಿರ್ದೇಶಕ ಪ್ರಶಾಂತ್ ವರ್ಮಾ, ಪ್ರಸ್ತುತ ರಿಷಬ್ ಶೆಟ್ಟಿ ಜೊತೆ ‘ಜೈ ಹನುಮಾನ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದೇ ಪ್ರಶಾಂತ್ ವರ್ಮಾ ‘ಮಹಾಕಾಳಿ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕಿ ಪೂಜಾ ಕೊಲ್ಲೂರು ಸಹ ಕನ್ನಡದವರೇ ಆಗಿದ್ದು, ಈ ಹಿಂದೆ ತೆಲುಗಿನ ‘ಮಾರ್ಟಿನ್ ಲೂಥರ್ ಕಿಂಗ್’ ಸಿನಿಮಾವನ್ನು ನಿರ್ದೇಶಿಸಿದ್ದರು. ಸಂಪೂರ್ಣೇಶ್ ಬಾಬು ನಾಯಕನಾಗಿ ನಟಿಸಿದ್ದ ಆ ಸಿನಿಮಾ ತೆಲುಗಿನ ‘ಮಂಡೇಲ’ ಚಿತ್ರದ ರೀಮೇಕ್ ಆಗಿತ್ತು. ಇದೀಗ ‘ಮಹಾಕಾಳಿ’ ಪೂಜಾ ಕೊಲ್ಲೂರು ಅವರ ಸ್ವಂತ ಕಥೆ ಆಧಾರಿತ ಮಹತ್ವಾಕಾಂಕ್ಷಿ ಸಿನಿಮಾ ಆಗಿದೆ.

You Might Also Like

ಸಕ್ಸಸ್ ಸಂಭ್ರಮದಲ್ಲಿ “ಬಘೀರ” ಟೀಮ್

ಬೆಂಗಳೂರಲ್ಲಿ ಮಳೆ ಸಿಂಚನ, ರಾಜ್ಯದ ಹಲವೆಡೆ 2 ದಿನ ಮಳೆ ಮುನ್ಸೂಚನೆ

ಬಿಜೆಪಿ ಅನಂತ್ ಕುಮಾರ್ ಹೆಗಡೆಯವರ ವಿರುದ್ಧ ಪ್ರತಿಭಟನೆ ಮಾಡಲಿ : ಎಂ.ಬಿ.ಪಾಟೀಲ್

ಭಾರೀ ಮಳೆಗೆ ತತ್ತರಿಸಿದ ಮಹಾನಗರಿ ಮುಂಬೈ, ಸಂಚಾರ ಅಸ್ತವ್ಯಸ್ಥ

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

TAGGED:Akshay KhannaDhurandharTelugu Film Industry
Share This Article
Facebook Copy Link Print
Previous Article Cricketer ಹೆಲ್ಮೆಟ್ ಮೇಲೆ ಪ್ಯಾಲೆಸ್ಟೈನ್ ಬಾವುಟ ಅಂಟಿಸಿಕೊಂಡಿದ್ದ ಕ್ರಿಕಟಿಗ : ಭಾರಿ ವಿವಾದ ಸೃಷ್ಟಿ
Next Article Suresh 01 Suresh 01 Suresh 01 ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ ಮಾಡಿದ ಶಾಸಕ ಸುರೇಶ್‌ಕುಮಾರ್‌ಗೆ ಪ್ರಧಾನಿ ಮೋದಿ ಶ್ಲಾಘನೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

PM Modi PM Modi PM Modi
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
ರಾಷ್ಟ್ರೀಯ-National
March 24, 2026
Dead Body Dead Body Dead Body
ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್​-Bidar
March 24, 2026
Delhi Assembly Complex
ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
ರಾಷ್ಟ್ರೀಯ-National
March 24, 2026
Supreme Court Supreme Court Supreme Court
ಹಿಂದೂ, ಬೌದ್ಧ, ಸಿಖ್‌ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ
ರಾಜ್ಯ-Karnataka Latest
March 24, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up