ಕುಣಿಗಲ್, ಜನವರಿ 8: ಕುಣಿಗಲ್ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೋಟೆಲ್‌ಗೆ ರೈಡರ್ ಸಿನಿಮಾದ ಖ್ಯಾತ ನಟಿ ಅನುಷಾ ರೈ ಅವರು ಭೇಟಿ ನೀಡಿದರು. ಹೋಟೆಲ್ ಉದ್ಘಾಟಿಸಿ ಮಾತನಾಡಿದ ಅವರು, ಕುಣಿಗಲ್‌ನಲ್ಲಿ ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೋಟೆಲ್ ಆರಂಭವಾಗಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು.
ಬೆಂಗಳೂರಿನಿಂದ ನೇರವಾಗಿ ಕುಣಿಗಲ್‌ಗೆ ಆಗಮಿಸಿದ ಅನುಷಾ ರೈ, ಮನೆಯಿಂದ ಹೊರಟು ನೇರವಾಗಿ ಹೋಟೆಲ್‌ಗೆ ಭೇಟಿ ನೀಡಿ, ಅಲ್ಲಿನ ಪ್ರಸಿದ್ಧ ದೊನ್ನೆ ಬಿರಿಯಾನಿಯ ಸವಿಯನ್ನು ಆಸ್ವಾದಿಸಿದರು. ನಂತರ ಸಂಪೂರ್ಣ ನ್ಯೂಸ್ ಚಾನೆಲ್‌ನೊಂದಿಗೆ ಮಾತನಾಡಿದ ಅವರು, ಕುಣಿಗಲ್ ಜನತೆಗೆ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಚಿಕ್ಕಪೇಟೆ ದೊನ್ನೆ ಬಿರಿಯಾನಿ ಹೋಟೆಲ್ ನೂತನವಾಗಿ ಆರಂಭವಾಗಿರುವುದರಿಂದ ಪಟ್ಟಣದ ಆಹಾರ ಪ್ರಿಯರಲ್ಲಿ ಉತ್ಸಾಹ ಹೆಚ್ಚಿದ್ದು, ನಟಿ ಅನುಷಾ ರೈ ಅವರ ಭೇಟಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿತು.

