By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ನಾಳೆಯಿಂದ ಸಾರಿಗೆ ನೌಕರರ ಮುಷ್ಕರ : ಬಸ್ ಸೇವೆ ಇರುತ್ತಾ..? ಸಾರಿಗೆ ಸಚಿವರು ಹೇಳಿದ್ದೇನು..? ಜಾರಿಯಾಗುತ್ತಾ ಎಸ್ಮಾ..?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಜ್ಯ-Karnataka - ನಾಳೆಯಿಂದ ಸಾರಿಗೆ ನೌಕರರ ಮುಷ್ಕರ : ಬಸ್ ಸೇವೆ ಇರುತ್ತಾ..? ಸಾರಿಗೆ ಸಚಿವರು ಹೇಳಿದ್ದೇನು..? ಜಾರಿಯಾಗುತ್ತಾ ಎಸ್ಮಾ..?

ರಾಜ್ಯ-KarnatakaLatest

ನಾಳೆಯಿಂದ ಸಾರಿಗೆ ನೌಕರರ ಮುಷ್ಕರ : ಬಸ್ ಸೇವೆ ಇರುತ್ತಾ..? ಸಾರಿಗೆ ಸಚಿವರು ಹೇಳಿದ್ದೇನು..? ಜಾರಿಯಾಗುತ್ತಾ ಎಸ್ಮಾ..?

Transport employees' strike from tomorrow

Published February 18, 2026
Share
2 Min Read
KSRTC Strike KSRTC Strike KSRTC Strike
SHARE

ಬೆಂಗಳೂರು, ಫೆ.18: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು “ಬೆಂಗಳೂರು ಚಲೋ”ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರಕ್ಕೆ ಕರೆ ನೀಡಿರುವ ನಾಲ್ಕು ಸಾರಿಗೆ ನಿಗಮಗಳ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಮುಷ್ಕರದ ಸಂದರ್ಭದಲ್ಲೂ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಅಗತ್ಯ ಎದುರಾಗುವುದಿಲ್ಲ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

“ಸಂಘಟನೆಗಳ ಮುಖಂಡರು ಬಸ್ ಸೇವೆ ಸ್ಥಗಿತಗೊಳಿಸುವುದಾಗಿ ಹೇಳಿಲ್ಲ. ಸರ್ಕಾರದ ಗಮನ ಸೆಳೆಯಲು ‘ಬೆಂಗಳೂರು ಚಲೋ’ ನಡೆಸುತ್ತಿದ್ದಾರೆ,” ಎಂದು ಸಚಿವರು ಹೇಳಿದರು.

ಬಿಜೆಪಿ ವಿರುದ್ಧ ಆಕ್ರೋಶ

ಪ್ರಯಾಣದರ ಹಾಗೂ ಲಗೇಜ್ ಸಾಗಾಣಿಕೆ ದರ ಹೆಚ್ಚಳ ವಿಚಾರದಲ್ಲಿ ಬಿಜೆಪಿಯನ್ನು ಟೀಕಿಸಿದ ಸಚಿವರು, “2021ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರಯಾಣದರ ಹಾಗೂ ಸಾಗಾಣಿಕೆ ದರ ಏಕಕಾಲದಲ್ಲಿ ಹೆಚ್ಚಿಸಿರಲಿಲ್ಲವೇ?” ಎಂದು ಪ್ರಶ್ನಿಸಿದರು.

ಈ ಹಿಂದೆ ಸಾರಿಗೆ ಸಚಿವರಾಗಿದ್ದ ಆರ್. ಅಶೋಕ್ ಐದು ವರ್ಷಗಳಲ್ಲಿ ಶೇ.47ರಷ್ಟು ಪ್ರಯಾಣದರ ಹೆಚ್ಚಿಸಿದ್ದರು. ಇದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದರು ಎಂದು ತಿಳಿಸಿದರು.

ಸಾರಿಗೆ ಸಂಸ್ಥೆಗಳಲ್ಲಿ 30 ಕೆ.ಜಿ.ವರೆಗೆ ಸರಕು ಸಾಗಾಣಿಕೆ ಉಚಿತವಾಗಿದ್ದು, ಅದರ ಮೀರಿದ ಪ್ರಮಾಣಕ್ಕೆ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. “ಶ್ರೀಮಂತರಿಂದ ಪಡೆದು ಬಡವರಿಗೆ ನೀಡುವುದು ಸರ್ಕಾರದ ನೀತಿ,” ಎಂದೂ ಹೇಳಿದರು.

‘ನೋ ವರ್ಕ್‌, ನೋ ಪೇ’ ಎಚ್ಚರಿಕೆ

ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ವಿರುದ್ಧ ‘ನೋ ವರ್ಕ್‌, ನೋ ಪೇ’ ಜಾರಿಗೆ ತರಲಾಗಿದೆ. ಅಗತ್ಯವಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸಾ) ಜಾರಿಗೊಳಿಸುವುದಕ್ಕೂ ಇಲಾಖೆ ಚಿಂತನೆ ನಡೆಸಿದೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಈಶಾನ್ಯ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಮೊದಲು ಮನವೊಲಿಸುವ ಪ್ರಯತ್ನ ನಡೆಯಲಿದ್ದು, ಅಗತ್ಯವಿದ್ದರೆ ವೇತನ ಕಡಿತ ನೋಟಿಸ್‌, ಅಮಾನತು ಅಥವಾ ಕೊನೆಗೆ ಎಸಾ ಜಾರಿಯಂತಹ ಕ್ರಮಗಳನ್ನೂ ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಷ್ಕರ ಏಕೆ?
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ “ಬೆಂಗಳೂರು ಚಲೋ” ನಡೆಯಲಿದೆ. ಫೆ.20ರಿಂದ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸುವ ಆಲೋಚನೆಯೂ ವ್ಯಕ್ತವಾಗಿದೆ.

ನೌಕರರ ಪ್ರಮುಖ ಬೇಡಿಕೆಗಳು:
38 ತಿಂಗಳ ಹಿಂಬಾಕಿ ವೇತನ ಪಾವತಿ
1-1-2024ರಿಂದ ವೇತನ ಪರಿಷ್ಕರಣೆ ಜಾರಿ
ಸರ್ಕಾರಿ ನೌಕರರಿಗೆ ಸಮಾನ ವೇತನ
ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಿಕೆ

ಆದರೆ ಸರ್ಕಾರ 2026ರ ಜನವರಿ 1ರಿಂದ ವೇತನ ಪರಿಷ್ಕರಣೆ ಜಾರಿಗೆ ತರಲು ಹಾಗೂ 38 ತಿಂಗಳ ಬದಲು 18/20 ತಿಂಗಳ ಹಿಂಬಾಕಿ ನೀಡಲು ಸಿದ್ಧವೆಂದು ತಿಳಿಸಿದೆ. ಇದಕ್ಕೆ ಜಂಟಿ ಕ್ರಿಯಾ ಸಮಿತಿ ಒಪ್ಪದೇ ಪ್ರತಿಭಟನೆಯ ಹಾದಿ ಹಿಡಿದಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಮ್ಮ ಹೋರಾಟದ ಉದ್ದೇಶ ಮನವರಿಕೆ ಮಾಡಲು ಜಂಟಿ ಕ್ರಿಯಾ ಸಮಿತಿ ಕರಪತ್ರ ಹಂಚುವ ಕಾರ್ಯ ಆರಂಭಿಸಿದೆ. ಹಿಂದಿನ ಮುಷ್ಕರ ಸಂದರ್ಭ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಜನಬೆಂಬಲ ಗಳಿಸಲು ನೌಕರರು ಪ್ರಯತ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ, “ಬೆಂಗಳೂರು ಚಲೋ” ಕರೆ ಹಿನ್ನೆಲೆ ಸಾರಿಗೆ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ನಾಳೆಯ ಪ್ರತಿಭಟನೆ ಹೇಗೆ ತಿರುವು ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

You Might Also Like

Video : ಸೆಲ್ಫೀ ಕೇಳಿದ ಅಭಿಮಾನಿಯನ್ನು ತಳ್ಳಿ ಮತ್ತೆ ಟ್ರೊಲ್ ಆದ ಜಯಾ ಬಚ್ಚನ್

ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರುಗಳ ತೀವ್ರ ಸಂತಾಪ

ಜೂನ್​ 26ರಂದು ಲೋಕಸಭಾ ಸ್ಪೀಕರ್ ಚುನಾವಣೆ- ​ 25ರವರೆಗೆ ಬೆಂಬಲ ಪತ್ರ ಸಲ್ಲಿಕೆಗೆ ಅವಕಾಶ

ಲಿವ್ ಇನ್ ಪಾರ್ಟ್ನರ್‌ನ ಕೊಂದು ಕಬೋರ್ಡ್ನಲ್ಲಿ ತುಂಬಿಸಿಟ್ಟವನ ಬಂಧನ

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

TAGGED:KSRTCRamalinga Reddy
Share This Article
Facebook Copy Link Print
Previous Article sgadgdgdg sgadgdgdg sgadgdgdg ರಾಜ್ಯದಲ್ಲಿ ಪ್ರಾಣಿಗಳ ರಾಜಕೀಯ : ನಾಯಿ-ಕೋತಿ-ದನಗಳನ್ನು ಬಳಸಿಕೊಂಡು ಕಚ್ಚಾಟ
Next Article Crime 01 Crime 01 Crime 01 ಬೆಂಗಳೂರಲ್ಲಿ ಒಂದೇ ಮಾದರಿಯ 2 ಕೊಲೆ : ಪ್ರತ್ಯಕ ಪ್ರಕರಣಗಳಲ್ಲಿ ಪತ್ನಿಯರನ್ನು ಹತ್ಯೆ ಮಾಡಿದ ಗಂಡಂದಿರು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

sagadgzdg sagadgzdg sagadgzdg
ಬಳ್ಳಾರಿ : ಆಟೋ LPG ಅಭಾವ ತೀವ್ರ, ಚಾಲಕರಿಗೆ ಡಬಲ್ ಹೊಡೆತ
ಬಳ್ಳಾರಿ-Ballary
April 7, 2026
Rain Alert
ರಾಜ್ಯದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ ಸಾಧ್ಯತೆ
ರಾಜ್ಯ-Karnataka
April 7, 2026
asfsg asfsg asfsg
ಬಾಂಗ್ಲಾದೇಶದ ಮೊದಲ ಮಹಿಳಾ ಸ್ಪೀಕರ್ ಆಗಿದ್ದ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್
ವಿದೇಶ-International
April 7, 2026
Auto Drivers Auto Drivers Auto Drivers
ಎಲ್‌ಪಿಜಿ ಅಭಾವದಿಂದ ಸಂಕಷ್ಟ : ಪ್ರತಿಭಟನೆಗೆ ಮುಂದಾದ ಆಟೋ ಚಾಲಕರು
ರಾಜ್ಯ-Karnataka
April 7, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up