ಬಹುತೇಕ ಎಲ್ಲರೂ ಹಣ್ಣುಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಆರೋಗ್ಯ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳುವವರು ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದಾಗ್ಯೂ ಕಾಲಮಾನಕ್ಕೆ ತಕ್ಕಂತೆ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಹಣ್ಣುಗಳನ್ನು ಸೇವಿಸುವುದು ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು. ಈ ಮಧ್ಯೆ ನೀವು ಅನಾರೋಗ್ಯಕ್ಕೆ ತುತ್ತಾದಾಗ ಅಥವಾ ಚಳಿಗಾಲದಲ್ಲಿ (Winter Season) ಯಾವ ಹಣ್ಣುಗಳನ್ನು ಸೇವಿಸಬೇಕು, ಯಾವ ಸಮಯದಲ್ಲಿ ಸೇವಿಸಬೇಕು ಎಂಬ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇಂಥ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಹಣ್ಣಗಳ (Fruits) ಸೇವನೆ ತುಂಬಾ ಮುಖ್ಯ. ಅದಕ್ಕಾಗಿಯೇ ಆಯುರ್ವೇದ ವೈದ್ಯರಾದ ನಿಧಿ ಪಾಂಡ್ಯ ಅವರು ಹಣ್ಣುಗಳ ಸೇವಿಸುವ ಮುನ್ನ ನೆನಪಿಡಬೇಕಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.
ತಾವು ಹಣ್ಣಿನ ಪ್ರೇಮಿ ಎನ್ನುವ ನಿಧಿ ಪಾಂಡ್ಯ, ಕಳೆದ 10 ವರ್ಷಗಳಲ್ಲಿ ನಾನು, ಹಣ್ಣನ್ನು ಸೇವಿಸುವ ವಿಧಾನವನ್ನು ಬದಲಾಯಿಸಿಕೊಂಡಿದ್ದೇನೆ. ಇದು ನನ್ನ ದೇಹವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ, ಹಣ್ಣುಗಳನ್ನು ಹೊಂದಲು ಕೆಲವು ನಿಯಮಗಳಿವೆ.
*ಒಮ್ಮೆಲೇ ಬೇರೆ ಬೇರೆ ಹಣ್ಣುಗಳನ್ನು ಅತಿಯಾಗಿ ತಿನ್ನಬೇಡಿ. ಪ್ರತಿಯೊಂದು ಹಣ್ಣುಗಳು ವಿಭಿನ್ನವಾಗಿ ವರ್ತಿಸುತ್ತವೆ. ಆದ್ದರಿಂದ ಒಂದು ಸಮಯದಲ್ಲಿ ಸರಿಯಾಗಿ ಹೊಂದಾಣಿಕೆಯಾಗುವ 1-2 ಹಣ್ಣುಗಳನ್ನು ಸೇವಿಸಿ.
*ಹಣ್ಣು ವೇಗವಾಗಿ ಹುದುಗುತ್ತದೆ. ತಾಜಾ ಹಣ್ಣುಗಳನ್ನು ತಿನ್ನಿ.
*ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಬೇಯಿಸದೇ ಇರುವ ಹಣ್ಣುಗಳನ್ನು ತಿನ್ನಿರಿ. ನಿಮ್ಮ ಆಹಾರವನ್ನು ಬೇಯಿಸಲು ಸೂರ್ಯನ ಶಕ್ತಿಯನ್ನು ಬಳಸಿ. ಹಾಗಾಗಿ ಬೆಳಗಿನ ಉಪಾಹಾರಕ್ಕೆ ಹಣ್ಣುಗಳು ಬೇಡ.
*ಚಳಿಗಾಲದಲ್ಲಿ ಹಸಿ ಹಣ್ಣುಗಳು ಬೇಡ. ಆದ್ದರಿಂದ ಸ್ಟ್ಯೂ ಮತ್ತು ದಾಲ್ಚಿನ್ನಿ ಸೇರಿಸಿ.
*ಎಲ್ಲಾ ಹಣ್ಣುಗಳು ಒಂದೇ ತೆರನಾಗಿರುವುದಿಲ್ಲ. ಎರಡು ಹಣ್ಣುಗಳು ಅವುಗಳ ಪೌಷ್ಟಿಕಾಂಶದಲ್ಲಿ ಅಕ್ಕಿ ಮತ್ತು ಗೋಧಿಯಂತೆ ಭಿನ್ನವಾಗಿರುತ್ತವೆ. ಆದ್ದರಿಂದ ಬುದ್ಧಿವಂತಿಕೆಯಿಂದ ಆರಿಸಿ.
*ಅನಾರೋಗ್ಯವಿದ್ದಾಗ ಹಣ್ಣುಗಳನ್ನು ಸೇವಿಸಬೇಡಿ. ವಿಶೇಷವಾಗಿ ಜ್ವರ ಅಥವಾ ಶೀತದ ಸಮಯದಲ್ಲಿ, ನಿಮ್ಮ ಅಗ್ನಿ ಸಮಾನವಾಗಿರುವುದಿಲ್ಲ. ಆದಾಗ್ಯೂ ದಾಳಿಂಬೆಯನ್ನು ಯಾರಾದರೂ ತಿನ್ನಬಹುದು. ನೀವು ಅನಾರೋಗ್ಯದಲ್ಲಿದ್ದಾಗಲೂ ನೀವು ದಾಳಿಂಬೆಯನ್ನು ತಿನ್ನಬಹುದು.
ಊಟದ ಮಧ್ಯೆ ಹಣ್ಣುಗಳನ್ನು ಸೇವಿಸಬಹುದೇ?
ಊಟದ ಮಧ್ಯೆ ಅಂದರೆ ಉಪಹಾರ – ಊಟ ಅಥವಾ ಮಧ್ಯಾಹ್ನದ ಊಟ – ರಾತ್ರಿ ಊಟದ ಮಧ್ಯೆ ಹಣ್ಣುಗಳನ್ನು ಸೇವಿಸುವುದು ಉತ್ತಮ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ಪವಿತ್ರ. ಎನ್. ರಾಜ್ ಹೇಳುತ್ತಾರೆ.
ಇದನ್ನೂ ಓದಿ:
ಮನೆಯಲ್ಲಿ ನೀವು ಮಾಡೋ ಪೂರಿ ಉಬ್ಬಬೇಕಾ? ಹಾಗಾದ್ರೆ ಈ ಟ್ರಿಕ್ಸ್ ಟ್ರೈ ಮಾಡಿ!
“ಹಣ್ಣುಗಳು ಉತ್ತಮ ಪ್ರಮಾಣದ ನಾರಿನಂಶವನ್ನು ಹೊಂದಿರುತ್ತವೆ. ಆದರೆ ಊಟದ ಜೊತೆಗೆ ಹಣ್ಣುಗಳನ್ನು ಸೇವಿಸುವುದು ಸೂಕ್ತವಲ್ಲ. ಅಲ್ಲದೆ, ಹಣ್ಣುಗಳು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ದರಿಂದ, ಊಟದ ಜೊತೆಗೆ ಸೇವಿಸಿದಾಗ, ಪೌಷ್ಠಿಕಾಂಶದ ಹೀರಿಕೊಳ್ಳುವಿಕೆಯು ಪೂರ್ಣವಾಗಿ ಆಗುವುದಿಲ್ಲ” ಎಂದು ಪವಿತ್ರಾ ಹೇಳುತ್ತಾರೆ.
ಈ 3 ಬಗೆಯ ಹಣ್ಣುಗಳನ್ನು ಎಂದಿಗೂ ಒಟ್ಟಿಗೆ ಸೇವಿಸಬೇಡಿ
*ಸಂಕೋಚಕ ಹಣ್ಣುಗಳು: ಸೇಬುಹಣ್ಣು, ಚೆರ್ರಿ ಮತ್ತು ಪಿಯರ್
*ಸಿಹಿ ಹಣ್ಣುಗಳು: ಪಪ್ಪಾಯ, ಮಾವು, ಬಾಳೆಹಣ್ಣು, ಪೀಚ್ ಮತ್ತು ಆವಕಾಡೊ
*ಹುಳಿ ಹಣ್ಣುಗಳು: ಕಿತ್ತಳೆ, ನಿಂಬೆ, ಟ್ಯಾಂಗರಿನ್ ಮತ್ತು ದ್ರಾಕ್ಷಿಹಣ್ಣು
ಈ ಮೂರು ವಿಧದ ಹಣ್ಣುಗಳನ್ನು ಸಂಯೋಜಿಸುವುದು ಕೆಲವು ಹೊಟ್ಟೆಯುಬ್ಬರ ಸೇರಿದಂತೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರಾದ ಪವಿತ್ರ ಎನ್ ರಾಜ್ ಹೇಳುತ್ತಾರೆ.
ದೇವಸ್ಥಾನದಲ್ಲಿ ಘಂಟೆ ಬಾರಿಸೋದು ಇದೇ ಕಾರಣಕ್ಕಂತೆ!
“ಒಂದು ಸಮಯದಲ್ಲಿ ಒಂದು ಹಣ್ಣನ್ನು ತಿನ್ನುವುದು ಯಾವಾಗಲೂ ಒಳ್ಳೆಯದು. ಏಕೆಂದರೆ ಪ್ರತಿಯೊಂದು ಹಣ್ಣುಗಳು ಪ್ರಕೃತಿಯಲ್ಲಿ ವಿಭಿನ್ನವಾಗಿವೆ. ಕೆಲವು ಸಿಟ್ರಸ್, ಕೆಲವು ಕಾರ್ಬೋಹೈಡ್ರೇಟ್-ಸಮೃದ್ಧ ಮತ್ತು ಕೆಲವು ವಿಟಮಿನ್ ಮತ್ತು ಪೊಟ್ಯಾಸಿಯಮ್-ಸಮೃದ್ಧವಾಗಿವೆ. ಆದ್ದರಿಂದ ಬೇರೆ ಬೇರೆ ಹಣ್ಣುಗಳ ಮಿಶ್ರಮ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಪವಿತ್ರಾ ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

