**ನವದೆಹಲಿ: ಕೋವಿಡ್ 19 ಲಸಿಕೆಗಳು (**COVID-19 vaccine) ಭಾರತೀಯ ಯುವಜನರಲ್ಲಿ ಹಠಾತ್ ಸಾವಿನ (Sudden death) ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಖಾತ್ರಿಪಡಿಸಿದೆ. ಆದರೆ ಇತ್ತೀಚೆಗೆ ಹೃದಯಾಘಾತದಿಂದ (Heart Atattck) ಯುವಕರು ಸಾವನ್ನಪ್ಪುತ್ತಿರುವುದಕ್ಕೆ ಕಾರಣಗಳೇನು ಎಂಬುದನ್ನು ಮೆಡಿಕಲ್ ರಿಸರ್ಚ್ ತಿಳಿಸಿದ್ದು, ಕೋವಿಡ್-19 ಹಿನ್ನಲೆ ಆಸ್ಪತ್ರೆಗೆ ದಾಖಲು, ಕುಟುಂಬದ ಹಠಾತ್ ಸಾವಿನ ಇತಿಹಾಸ ಹಾಗೂ ಜೀವನಶೈಲಿ ಭಾರತದಲ್ಲಿ ಯುವಕರ ಹಠಾತ್ ಸಾವಿಗೆ ಕಾರಣವಾಗಿದೆ. ಇನ್ನೂ ಸಾಕಷ್ಟು ತನಿಖೆಗಳನ್ನು ಈ ಕುರಿತು ನಡೆಸಬೇಕಾಗಿದೆ ಎಂದು ರಿಸರ್ಚ್ ಸೆಂಟರ್ ತಿಳಿಸಿದೆ.
ಭಾರತದ ಯುವಕರ ಹಠಾತ್ ಸಾವಿನ ಪ್ರಕರಣಗಳಿಗೆ ಕಾರಣ ಕೋವಿಡ್-19 ಲಸಿಕೆಯಲ್ಲ ಇದಕ್ಕೆ ಹಲವಾರು ಕಾರಣಗಳಿದ್ದು, ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಒತ್ತಡ, ಕುಟುಂಬದಲ್ಲಿ ಸಂಭವಿಸಿದ ಹಠಾತ್ ಸಾವು ಹಾಗೂ ಜೀವನಶೈಲಿಯಲ್ಲಿ ನಡೆದಿರುವ ಕೆಲವೊಂದು ಮಾರ್ಪಾಡುಗಳು ಹಠಾತ್ ಸಾವಿನ ಸಾಧ್ಯತೆಯನ್ನು ಹೆಚ್ಚಿಸಿವೆ ಎಂದು ರೀಸರ್ಚ್ ಸೆಂಟರ್ ತಿಳಿಸಿದ್ದು, ಐಸಿಎಮ್‌ಆರ್ ಅಧ್ಯಯನ ನಡೆಸಿರುವುದಾಗಿ ತಿಳಿಸಿದೆ.
ಭಾರತದಲ್ಲಿ 18-45 ವರ್ಷ ವಯಸ್ಸಿನ ವಯಸ್ಕರಲ್ಲಿ ನಿಗೂಢ ಸಾವುಗಳಿಗೆ ಸಂಬಂಧಿಸಿದ ಅಂಶಗಳು ಎಂಬ ಶೀರ್ಷಿಕೆಯಡಿಯಲ್ಲಿ ಈ ಸಾವುಗಳು ಕೋವಿಡ್ ಲಸಿಕೆಯಿಂದ ಅಲ್ಲ ಇನ್ನಿತರ ಕಾರಣಗಳಿಂದ ಸಂಭವಿಸಿದೆ ಎಂದು ಅಧ್ಯಯನ ತಿಳಿಸಿದೆ.
ರೀಸರ್ಚ್ ಸೆಂಟರ್ ನಡೆಸಿದೆ ಅಧ್ಯಯನ
ಭಾರತದಲ್ಲಿ ಆರೋಗ್ಯವಂತ ವಯಸ್ಕರಲ್ಲಿ ಹಠಾತ್ ಸಾವಿನ ವರದಿಗಳು ಹೊರಹೊಮ್ಮಲು ಪ್ರಾರಂಭಿಸಿದ ನಂತರ ಸಂಶೋಧಕರು ತನಿಖೆ ನಡೆಸಿದ್ದಾರೆ. ಏಕೆಂದರೆ , ಈ ಸಾವುಗಳ ಹಿಂದೆ ಕೋವಿಡ್-19 ಅಥವಾ ಅದರ ವಿರುದ್ಧ ತೆಗೆದುಕೊಳ್ಳಲಾದ ಲಸಿಕೆಯೇ ಕಾರಣ ಎಂಬ ಕಳವಳ ಉಂಟಾಗಿತ್ತು.
ಹಾಗಾಗಿ ಸಂಶೋದನಾ ಸಂಸ್ಥೆ, 18-45 ವರ್ಷ ವಯಸ್ಸಿನ ಭಾರತೀಯ ವಯಸ್ಕರಲ್ಲಿ ಹಠಾತ್ ಸಾವುಗಳಿಗೆ ಕಾರಣವೇನು ಎಂಬುದನ್ನು ಅಧ್ಯಯನ ಮಾಡಿದೆ. ಸಂಶೋಧಕರು ಈ ಬಗ್ಗೆ 729 ಪ್ರಕರಣಗಳ ಮಾಹಿತಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದೆ. ಅಧ್ಯಯನ ಮಾಡಲಾದ ಪ್ರಕರಣಗಳು 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಯಾವುದೇ ಅಸ್ವಸ್ಥತೆಗಳಿಲ್ಲದೆ ಅಕ್ಟೋಬರ್ 1, 2021- ಮಾರ್ಚ್ 31, 2023 ರ ನಡುವೆ ನಿಗೂಢ ಕಾರಣಗಳಿಂದ ಮರಣ ಹೊಂದಿದ್ದಾರೆ. ಇದಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಿಳಿಸಿದೆ.
ಐಸಿಎಮ್‌ಆರ್ ವರದಿಯಲ್ಲೇನಿದೆ
ತಜ್ಞರು ಕೋವಿಡ್ – 19 ಲಸಿಕೆ/ಸೋಂಕು ಮತ್ತು ಕೋವಿಡ್ ನಂತರದ ಆರೋಗ್ಯ ಪರಿಸ್ಥಿತಿಗಳು, ಕುಟುಂಬದಲ್ಲಿ ಯಾರಾದರೂ ಹಠಾತ್ ಸಾವನ್ನಪ್ಪಿದ್ದಾರಾ?, ಧೂಮಪಾನ ವ್ಯಸನ, ಮಾದಕವಸ್ತು ಬಳಕೆ, ಮದ್ಯದ ವ್ಯಸನಿ ಹಾಗೂ ಸಾವಿಗೆ ಎರಡು ದಿನಗಳ ಮುಂಚಿತವಾಗಿ ತೀವ್ರವಾದ ದೇಹ ದಂಡನೆ ಮಾಡಿ ಕೆಲಸ ಮಾಡಿರುವರೇ ಎಂಬುದರ ಬಗ್ಗೆ ದತ್ತಾಂಶಗಳನ್ನು ಸಂಗ್ರಹ ಮಾಡಿದ್ದಾರೆ.
ಪತಿ-ಪತ್ನಿ ತಬ್ಬಿಕೊಂಡು ಮಲಗಿದ್ರೆ ಏನು ಪ್ರಯೋಜನ?
ಹಠಾತ್ ಸಾವಿಗೆ ಇದೇ ಕಾರಣ
ವಯಸ್ಕರಲ್ಲಿ ಈ ಹಠಾತ್ ಸಾವಿಗೆ ಕಾರಣಗಳನ್ನು ಸ್ಪಷ್ಟಪಡಿಸಿರುವ ಸಂಶೋಧಕರು, ಕುಟುಂಬದಲ್ಲಿ ಹಠಾತ್ ಸಾವಿನ ಇತಿಹಾಸ, ಸಾವಿನ ಮೊದಲು ಅತಿಯಾದ ಮದ್ಯಪಾನ, ಡ್ರಗ್ಸ್ ಬಳಸುವುದು ಮತ್ತು ತೀವ್ರ-ತೀವ್ರ ದೈಹಿಕ ಚಟುವಟಿಕೆಯನ್ನು ಮಾಡಿರುವುದರಿಂದ ಹಠಾತ್ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಲಸಿಕೆಯ ಎರಡು ಡೋಸ್‌ಗಳು ನಿಗೂಢ ಹಠಾತ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ. ಆದರೆ ಒಂದೇ ಡೋಸ್ ಪಡೆದಿರುವವರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂದು ಐಸಿಎಮ್‌ಆರ್ ಅಧ್ಯಯನ ತಿಳಿಸಿದೆ.
ಎಚ್ಚರಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವರು
ಇದಕ್ಕೂ ಮೊದಲು, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಐಸಿಎಮ್‌ಆರ್ ಅಧ್ಯಯನವನ್ನು ಉಲ್ಲೇಖಿಸಿ ತೀವ್ರವಾದ ಕೋವಿಡ್ – 19 ಸೋಂಕಿನ ಹಿಂದಿನ ಇತಿಹಾಸ ಹೊಂದಿರುವವರು ಅತಿಯಾಗಿ ಪರಿಶ್ರಮ ಪಡಬಾರದು ಎಂಬ ಎಚ್ಚರಿಕೆ ನೀಡಿದ್ದರು. ಈ ವರ್ಷದ ಅಕ್ಟೋಬರ್‌ನಲ್ಲಿ ಗುಜರಾತ್‌ನಾದ್ಯಂತ ನವರಾತ್ರಿ ಆಚರಣೆಗಳಿಂದ ವರದಿಯಾದ ಹಠಾತ್ ಸಾವುಗಳ ಬೆನ್ನಲ್ಲೇ ಆರೋಗ್ಯ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಐಸಿಎಮ್‌ಆರ್ ವಿವರವಾದ ಅಧ್ಯಯನ ನಡೆಸಿದ್ದು, ಈ ಅಧ್ಯಯನದ ಪ್ರಕಾರ, ತೀವ್ರವಾದ COVID-19 ಸೋಂಕಿನಿಂದ ಬಳಲಿದ್ದವರು ಹೃದಯಾಘಾತಗಳಂತಹ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಒಂದೆರಡು ವರ್ಷಗಳವರೆಗೆ ತಮ್ಮನ್ನು ತಾವು ಅತಿಯಾಗಿ ದಂಡಿಸಬಾರದು ಎಂದು ತಿಳಿಸಿದ್ದಾರೆ. ಅಂದರೆ ಕಠಿಣ ವ್ಯಾಯಾಮಗಳನ್ನು ಮಾಡುವುದು, ಓಟ, ಅತಿಯಾಗಿ ದುಡಿಯುವುದು ಮೊದಲಾದವುಗಳಿಂದ ಕೊಂಚ ವಿಶ್ರಾಂತಿ ಪಡೆಯಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

