ಅಯೋಧ್ಯೆ/ರಾಮಮಂದಿರ: ರಾಮನವಮಿ ದಿನದಂದು ರಾಮಮಂದಿರ (Rammandir) ಗರ್ಭಗುಡಿಯಲ್ಲಿರುವ ರಮಲಲ್ಲಾನ (Rama lalla) ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳುತ್ತದೆ. ಅದಕ್ಕೆ ಸಹಕಾರಿಯಾಯಾದ ಆಪ್ಟಿಕಲ್ ಯಂತ್ರವನ್ನು ಬೆಂಗಳೂರು ಮೂಲದ ಕಂಪನಿಯೊಂದು ರಾಮ ಜನ್ಮಭೂಮಿ ಟ್ರಸ್ಟ್‌ಗೆ ಕೊಡುಗೆಯಾಗಿ ನೀಡಿರುವುದು ವಿಶೇಷ.
ಎರಡು ಸಾರ್ವಜನಿಕ ಸಂಸ್ಥೆಗಳು ಮತ್ತು ಜಯನ ಕುಟುಂಬ ನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಕಂಪನಿಯು ಅಯೋಧ್ಯೆ ರಾಮಮಂದಿರಕ್ಕೆ ಸೂರ್ಯ ತಿಲಕ ಯಂತ್ರವನ್ನು (Surya Tilak Machine) ಕೊಡುಗೆಯಾಗಿ ನೀಡಿದೆ. ಇದನ್ನೂ ಓದಿ: ಕೋಲ್ಕತ್ತಾಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಬಿದ್ದು 5 ಮಂದಿ ಸಾವು

ಈ ಯಂತ್ರವನ್ನು ಜಿಗಣಿ ಲಿಂಕ್ ರಸ್ತೆಯಲ್ಲಿರುವ ಆಪ್ಟಿಕ್ಸ್ & ಅಲೈಡ್ ಇಂಜಿನಿಯರಿಂಗ್ ಪ್ರೈವೆಟ್ ಲಿಮಿಟೆಡ್ ಕೊಡುಗೆಯಾಗಿ ನೀಡಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ದಿಪಡಿಸಲಾಗಿದೆ. ಇದನ್ನೂ ಓದಿ: ಒಕ್ಕಲಿಗ, ಲಿಂಗಾಯತ ವೋಟ್‌ಬ್ಯಂಕ್ ಕಬ್ಜಕ್ಕೆ ಅಖಾಡಕ್ಕೆ ಧುಮುಕಿದ ಹೆಚ್‌ಡಿಕೆ
ಸುಮಾರು 84 ಲಕ್ಷ ರೂ. ಮೌಲ್ಯದ ಈ ಯಂತ್ರವನ್ನು ಅಭಿವೃದ್ದಿಪಡಿಸಲು ಮತ್ತು ಇದರ ವಿನ್ಯಾಸಕ್ಕೆ ನಾಲ್ಕು ತಿಂಗಳ ಸಮಯ ಬೇಕಾಯಿತ್ತು. ಪ್ರತಿ ರಾಮನವಮಿಯಿಯೊಂದು 3-4 ನಿಮಿಷಗಳ ಕಾಲ ರಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬೀಳಲು ಇದು ಸಹಾಕಾರಿಯಾಗಲಿದೆ ಎಂದು ಕಂಪನಿ ವ್ಯವಸ್ಥಪಕ ನಿರ್ದೇಶಕ ರಾಜೇಂದ್ರ ಕೊಟಾರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ತಮ್ಮ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್
,

