ಬೆಂಗಳೂರು: ಲೋಕಸಭಾ ಚುನಾವಣೆ ಎಲ್ಲೆಡೆ ರಂಗೇರಿದ್ದು, ನರೇಂದ್ರಾ ಮೋದಿ (Narendra Modi) ರಾಜಧಾನಿಗೆ ವಿಶೇಷ ವಿಮಾನದಲ್ಲಿ ಬಂದಿಳೀದಿದ್ದಾರೆ. ನಂತರ ಅವರು ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್ನಿಂದ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಅವರು ಚಿಕ್ಕಬಳ್ಳಾಪುರ ತೆರಳಿದ ಬಳಿಕ ಚೊಕ್ಕಹಳ್ಳಿ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಮೈತ್ರಿ ಅಭ್ಯರ್ಥಿಗಳಖನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಾದ ಮಲ್ಲೇಶ್ ಬಾಬು, ಡಾ.ಕೆ.ಸುಧಾಕರ್ ಪರ ಮತಬೇಟೆ ನಡೆಸಿದ್ದಾರೆ. ಇದನ್ನೂ ಓದಿ: ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ: ರಿಷಬ್ ಶೆಟ್ಟಿ
ಕರ್ನಾಟಕದ ಬಗ್ಗೆ ದೇವೇಗೌಡ (Devegowda) ಅವರಿಗೆ ಬಹಳ ಕಾಳಜಿ. ನನಗೂ ದೇವೇಗೌಡ್ರ ಆಶೀರ್ವಾದ ಸಿಕ್ಕಿದೆ. ಎನ್‌ಐಡಿಐಎ ಒಕ್ಕೂಟ ಇದೆ, ಆದ್ರೆ ಭವಿಷ್ಯದ ಲಿಡರ್ ಇಲ್ಲ. ವಿರೋಧ ಪಕ್ಷಗಳು ಕೇವಲ ಭ್ರಷ್ಟಾಚಾರ. ಕೋಲಾರ, ಚಿಕ್ಕಬಳ್ಳಾಪುರದ ಜನ ಮೊತ್ತೊಮ್ಮೆ ಮೋದಿ ಸರ್ಕಾರ ಎಂದು ಸಂದೇಶ ಕೊಡಬೇಕಿದೆ ಎಂದರು.ಇದನ್ನೂ ಓದಿ: ಕೊನೆಗೂ ಸಿಲಿಕಾನ್ ಸಿಟಿಯತ್ತ ಮುಖಮಾಡಿದ ಮಳೆರಾಯ: ಇಂದು ಸಂಜೆ ಬರಲಿದೆ ಭರ್ಜರಿ ಮಳೆ
ನಿಮಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಗ್ಯಾರಂಟಿ ಜೊತೆಗೆ ನಿಮ್ಮ ಮುಂದೆ ಬಂದಿದ್ದೇನೆ. ಎರಡು ಜಿಲ್ಲೆಗಳಿಗೂ ಉಚಿತ ರೇಷನ್ ಸಿಗುತ್ತಿದೆ. ಚಿಕ್ಕಬಳ್ಳಾಪುರದಲ್ಲೇ ಸುಮಾರು 4 ಲಕ್ಷ ಆಯುಷ್ಮಾನ್ ಫಲಾನುಭವಿಗಳು ಇದ್ದಾರೆ ಎಂದರು. ಇದನ್ನೂ ಓದಿ: ಸಿಸಿಬಿ ಇನ್ಸ್‌ಪೆಕ್ಟರ್ ಅಮಾನತು: ರೌಡಿ ಶೀಟರ್ ಜೊತೆ ಲಿಂಕ್ ಹೊಂದಿದ್ದ ಅಫೀಸರ್
70 ವರ್ಷ ದಾಟಿದ 5 ಲಕ್ಷ ಮಂದಿಗೆ ಉಚಿತ ಚಿಕಿತ್ಸೆ, ಚಿಕ್ಕಬಳ್ಳಾಪುರದಲ್ಲಿ 14,000 ಮತ್ತು ಕೋಲಾರದಲ್ಲಿ 20,000 ಮಂದಿಗೆ ಮನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ 3 ಕೋಟಿ ಮನೆ ನಿರ್ಮಾಣ ಮಾಡಲಾಗುತ್ತದೆ. ಇದುವೇ ಮೋದಿ ಗ್ಯಾರಂಟಿ ಎಂದರು. ಇದನ್ನೂ ಓದಿ: ನೇಹಾ ಲವ್ ಬಗ್ಗೆ ಫಯಾಜ್ ತಾಯಿ ಬಳಿ ನನ್ನನ್ನು ಲವ್ ಮಾಡುತ್ತಿದ್ದಾಳೆ ಎಂದಿದ್ದ

