ನವದೆಹಲಿ: ಲೋಕಸಭಾ ಚುನಾವಣೆಗೆ ದೇಶಾದ್ಯಂತ ಪ್ರಚಾರ, ಹೋರಾಟ ನಡೆಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮತದಾನಕ್ಕೂ ಮುನ್ನವೇ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ (BJP) ಪಕ್ಷಕ್ಕೆ ಮೊದಲ ಜಯ ತಂದು ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿ ಗೆದ್ದಿದ್ದು ಇಡೀ ದೇಶಕ್ಕೆ ಅಚ್ಚರಿ ಮೂಡಿಸಿದ್ದಾರೆ. ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಇತ್ತು. ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ಇಂದು ತಿರಸ್ಕೃತಗೊಂಡಿದೆ. ಇದರ ಜೊತೆಗೆ ಕಣದಲ್ಲಿದ್ದ 7 ಪಕ್ಷೇತರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮುಕೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೂರತ್ನ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವರು 2024ರ ಚುನಾವಣೆಯ ಮೊದಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮುಕೇಶ್ ದಲಾಲ್ ಚುನಾವಣಾಧಿಕಾರಿಯಿಂದ ಅವಿರೋಧ ಆಯ್ಕೆಯಾದ ಸರ್ಟಿಫಿಕೇಟ್ ಕೂಡ ಸ್ವೀಕಾರ ಮಾಡಿದ್ದಾರೆ. ಬಿಜೆಪಿ ಮೊದಲ ಸಂಸದ ಮುಖೇಶ್ ದಲಾಲ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇದನ್ನೂ ಓದಿ: 2016 ರ ಶಿಕ್ಷಕರ ಹಗರಣಕ್ಕೆ ಬಿಗ್ ಟ್ವಿಸ್ಟ್ -ಕೆಲಸ ಕಳೆದುಕೊಂಡ 25,000 ಶಿಕ್ಷಕರು
ಕಾಂಗ್ರೆಸ್ ಅಭ್ಯರ್ಥಿ ತಿರಸ್ಕಾರ ಯಾಕೆ?
ಸೂರತ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕಾರಗೊಂಡಿದೆ. ನಿಲೇಶ್ ಕುಂಭಾನಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಾಗಿತ್ತು. ಆದರೆ ಸೂಚಕ ಸಹಿ ಹಾಕಿದ್ದವರು ತಮ್ಮದ್ದಲ್ಲ ಎಂದಿದ್ದರಿಂದ ನಾಮಪತ್ರ ತಿರಸ್ಕಾರವಾಗಿದೆ. ಅಭ್ಯರ್ಥಿ ನಾಮಪತ್ರ ತಿರಸ್ಕಾರ ಆದ್ದರಿಂದ ಕಾಂಗ್ರೆಸ ಇದನ್ನ ಖಂಡಿಸಿದ್ದು, ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧಾರ ಮಾಡಿದೆ.
ಅವಿರೋಧ ಆಯ್ಕೆ ದಾಖಲೆ!
ಲೋಕಸಭಾ ಚುನಾವಣೆಯಲ್ಲಿ ಹೀಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಇದೇ ಮೊದಲಲ್ಲ. 1989ರಲ್ಲಿ ಶ್ರೀನಗರ ಲೋಕಸಭಾ ಕ್ಷೇತ್ರದಿಂದ ಮೊಹಮ್ಮದ್ ಶಫಿ ಭಟ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಬರೋಬ್ಬರಿ 35 ವರ್ಷದ ಬಳಿಕ ಮುಖೇಶ್ ದಲಾಲ್ ಅವರು ಸಂಸತ್‌ಗೆ ಆಯ್ಕೆಯಾದ 2ನೇ ಸಂಸದರಾಗಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಅಖಾಡದಿಂದ ದಿಂಗಾಲೇಶ್ವರ ಶ್ರೀ ಹಿಂದಕ್ಕೆ

