ಬೆಂಗಳೂರು: ರಾಜ್ಯ ಚುನಾವಣಾ ಪ್ರಚಾರ ಆಖಾಡಕ್ಕೆ ಇಂದು ಪ್ರಿಯಾಂಕಾ ಗಾಂಧಿ (Priyanka Gandhi) ಎಂಟ್ರಿ ಕೊಡುತ್ತಿದ್ದಾರೆ. ಇಂದು ಚಿತ್ರದುರ್ಗ (Chitradurga) ಲೋಕಸಭಾ ಕ್ಷೇತ್ರ ಹಾಗೂ ಸಂಜೆ ಬೆಂಗಳೂರು (Bengaluru) ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ .
ಪ್ರಿಯಾಂಕಾ ಅವರು ಮಹಿಳಾ ಮತದಾರರನ್ನ ಗಮನದಲ್ಲಿಟ್ಟುಕೊಂಡು ಇಂದಿನ ಪ್ರಚಾರ ನಡೆಸಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಮೂಲಕ ಮಹಿಳೆಯರಿಗೆ 2 ಸಾವಿರದ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿಸಲಾಗಿತ್ತು. ಈ ಬಾರಿಯೂ ಮಹಿಳಾ ಮತದಾರರ ಮನ ಗೆಲ್ಲಲು ಪ್ರಿಯಾಂಕಾ ಗಾಂಧಿ ಪ್ರಚರಕ್ಕೆ ಕಾಂಗ್ರೆಸ್ ಮೊರೆ ಹೋಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ- ಮನೆಯ ಮಗನೇ ಕೊಲೆಯ ಹಿಂದಿನ ಮಾಸ್ಟರ್‌ಮೈಂಡ್
ಎರಡು ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭದಲ್ಲಿ ಮಹಿಳಾ ಆಸ್ತ್ರ ಬಳಕೆ ಮೂಲಕ ಪ್ರಚಾರ ನೆಡೆಸಲಿದ್ದಾರೆ. ಗ್ಯಾರೆಂಟಿ ಜೊತೆಗೆ ಮಹಿಳಾ ಮತಗಳ ಗ್ಯಾರಂಟಿಗೆ ಪ್ರಿಯಾಂಕಾ ಮೂಲಕ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಒಟ್ಟಾರೆಯಾಗಿ ಈ ಬಾರಿಯೂ ಮಹಿಳಾ ಮತ ಗ್ಯಾರೆಂಟಿಗಾಗಿ ಪ್ರಿಯಾಂಕಾ ಗಾಂಧಿ ಮೂಲಕ ಮಹಿಳಾ ಮತ ಭೇಟೆಗೆ ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ಮೊದಲ ಜಯ: ಮತದಾನಕ್ಕೂ ಮೊದಲು ಗೆದಿದ್ದು, ಹೇಗೆ?

