ತೈಪೆ: ತೈವಾನ್‌ನಲ್ಲಿ (Taiwan) 6.3 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ. ತೈವಾನ್‌ನ ಪೂರ್ವ ಕರಾವಳಿಯಲ್ಲಿ 80 ಕ್ಕೂ ಹೆಚ್ಚು ಬಾರಿ ಭೂಮು ಕಂಪಿಸಿರುವ ಘಟನೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ನಡೆದಿದೆ.
ಭಾರತೀಯ (Indian) ಕಾಲಮಾನದ ಪ್ರಕಾರ, ರಾತ್ರಿ ಸುಮಾರಿಗೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಪ್ರಬಲ ಭೂಕಂಪನಗಳು ಸಂಭವಿಸಿದೆ. ತೈವಾನ್‌ನಲ್ಲಿ ರಾತ್ರಿ ಸುಮಾರು 2:30ರ ಅಸುಪಾಸು. ಹುವಾಲಿಯನ್ ಪುರ್ವ ಕೌಂಟಿಯಲ್ಲಿ ಭೂಮಿಯಿಂದ 5.5 ಕಿಲೋಮೀಟರ್‌ಗಳಷ್ಟು ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಇದೆ ಎಂದು ತೈವವಾನ್‌ನ ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಬೆಂಗಳೂರು, ಚಿತ್ರದುರ್ಗದಲ್ಲಿ ಪ್ರಚಾರದ ಅಖಾಡಕ್ಕೆ ಇಂದು ಪ್ರಿಯಾಂಕಾ ಗಾಂಧಿ ಎಂಟ್ರಿ
ಭೂಕಂಪನದಿಂದಾಗಿ ಹುವಾಲಿಯನ್ ಪ್ರದೇಶದಲ್ಲಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ. ಈ ಪೈಕಿ ಒಂದು ಕಟ್ಟಡ ಕುಸಿದು ಬಿದ್ದಿದ್ದು, ಇನ್ನೊಂದು ರಸ್ತೆಗೆ ವಾಲಿದೆ. ತೈವಾನ್ ಜೊತೆಗೆ ಜಪಾನ್, ಚೀನಾ ಮತ್ತು ಫಿಲಿಪೈನ್ಸ್ನಲ್ಲಿಯೂ ಲಘು ಕಂಪನದ ಅನುಭವವಾಗಿದೆ. ಸದ್ಯಕ್ಕೆ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಬಿಜೆಪಿಗೆ ಮೊದಲ ಜಯ: ಮತದಾನಕ್ಕೂ ಮೊದಲು ಗೆದಿದ್ದು, ಹೇಗೆ?

